ಚಿತ್ರದುರ್ಗ, ಮೇ- 11 : ಬಸವಣ್ಣನವರ ಸದಾಶಯ ಸರ್ವ ಸಮಾನತೆ ತರುವಂಥ ಕನಸು. ಅದು ಕಲ್ಯಾಣ ರಾಜ್ಯ ನಿರ್ಮಾಣದ ಆಶಯವೂ ಆಗಿತ್ತು. ಅದರಂತೆ ಅಂತಹ ಕಾರ್ಯವು ಅಂದಿನ ಅನುಭವ ಮಂಟಪದ ಮೂಲಕ ಸಾಕಾರಗೊಂಡಿತು ಎನ್ನುವುದಲ್ಲಿ ಎರಡು ಮಾತಿಲ್ಲ.
ಅಂತೆಯೇ ಅನುಭವ ಮಂಟಪ, ಶೂನ್ಯಪೀಠದ ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಪೀಠ ಪ್ರಾರಂಭವಾದಾಗಿನಿAದ ಕಲ್ಯಾಣ ಶರಣರ ಆಶಯ ಮತ್ತದರ ಮೌಲ್ಯಗಳನ್ನು ಅನುಷ್ಠಾನ್ಕಕೆ ತರುವ ಕೈಂಕರ್ಯವನ್ನು ಮಾಡುತ್ತಾ ಬಂದಿದೆ. ಅದರಂತೆ ಬೃಹನ್ಮಠವು ತಳ ಸಮುದಾಯದ ಅಭಿವೃದ್ಧಿಗೆ ಅವರಿಗೂ ಧಾರ್ಮಿಕ ಸ್ವಾತಂತ್ರö್ಯ ನೀಡಬೇಕೆಂಬ ಸದುz್ದೆÃಶದಿಂದ ನಿಮ್ನವರ್ಗದ ಯುವಕ ಯುವತಿಯರಿಗೆ ಧಾರ್ಮಿಕ ಮತ್ತು ಸಮಾಜ ಸೇವಾಧೀಕ್ಷೆ ನೀಡಿ ಅವರಿಗೆ ಬಸವತತ್ವ ಮತ್ತು ಜಾಗತಿಕ ಧರ್ಮಗಳ ಅಧ್ಯಯನ ಮಾಡಿಸಿದ ಮತ್ತು ಮಾಡಿಸುತ್ತಿರುವ ಕಾರ್ಯದಲ್ಲಿ ಮಗ್ನವಾಗಿದೆ.
ಆ ಮಾರ್ಗದಲ್ಲಿ ಬರುವ ಚಿತ್ರದುರ್ಗದ ಶಿವಶರಣ ಮಾದಾರಚೆನ್ನಯ್ಯ ಗುರುಪೀಠವೂ ಒಂದು. ಕಳೆದ ಎರಡುವರೆ ಮೂರು ದಶಕಗಳ ಹಿಂದೆ ಇಲ್ಲಿನ ಶ್ರೀ ಬಸವ ಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಶ್ರೀಮಠದಲ್ಲಿ ಧಾರ್ಮಿಕ ದೀಕ್ಷೆ ಪಡೆದು ಆ ಮೂಲಕ ಆ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತ ಬಂದಿz್ದÁರೆ.
ಅAತಹ ಶ್ರೀಗಳು ತಮ್ಮ ಗುರುಪೀಠದ ಮೂಲಕ ಒಂದು ಐತಿಹಾಸಿಕ ನಿರ್ಣಯವನ್ನು ಇಂದು ತೆಗೆದುಕೊಂಡಿz್ದÁರೆ. ಅದೇನೆಂದರೆ ತಮ್ಮ ಪೀಠಕ್ಕೆ ಬಾಲಕನೋರ್ವನನ್ನು ಐತಿಹಾಸಿಕ ದಿನ ಬಸವ ಜಯಂತಿ ಸುಸಂದರ್ಭದಲ್ಲಿ ವಟುವಾಗಿ ಸ್ವೀಕರಿಸಿ, ಬಸವತತ್ವ ಶರಣ ಪರಂಪರೆಯ ಧಾರ್ಮಿಕ ವಿಧಿ ವಿಧಾನಗಳ ಮೂಲಕ ಧಾರ್ಮಿಕ ದೀಕ್ಷೆ ನೀಡಿ, ‘ಜಯಬಸವ ಸ್ವಾಮೀಜಿ’ ಎನ್ನುವ ಅಭಿಧಾನ ನೀಡಿದ್ದಾರೆ. ಈ ಕರ‍್ಯವು ಐತಿಹಾಸಿಕ ದಿನ ಬಸವ ಜಯಂತಿಗೆ ಸಾರ್ಥಕತೆ ಬಂದಿದೆ.
ಅಂತಹ ಕಾರ್ಯಕ್ರಮ ನೆರವೇರಿಸಿ ಆ ಗುರು ಶಿಷ್ಯರಿಬ್ಬರು ಶ್ರೀ ಮುರುಘಾಮಠಕ್ಕೆ, ಪೀಠದ ಮೂಲ ಮುರುಗಿ ಶಾಂತವೀರರ ಸನ್ನಿಧಿಗೆ ಬಂದ ಸಂದರ್ಭದಲ್ಲಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯP್ಷÀರಾದ ಶಿವಯೋಗಿ ಕಳಸದ, ಆಡಳಿತ ಮಂಡಳಿ ನಿರ್ದೇಶಕರುಗಳಾದ ಡಾ. ಬಸವಕುಮಾರ ಸ್ವಾಮೀಜಿ, ಚಂದ್ರಶೇಖರ್ ಅವರು ಸೇರಿದಂತೆ ವಿವಿಧ ಮಠಗಳ ಶ್ರೀಗಳು, ಭಕ್ತರು, ಬಸವಾಭಿಮಾನಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಅವರೀರ್ವವರಿಗೂ ಶ್ರೀಮಠದ ಪರವಾಗಿ ಗೌರವಾದರಗಳಿಂದ ಅಭಿನಂದನೆ ಸಲ್ಲಿಸಿದರು.