ಹರಿಹರ ಮೇ 12 : ಹರಿಹರ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಬಿ.ಪಿ.ಹರೀಶ್ ಅವರು ತಮ್ಮ 64ನೇ ಹುಟ್ಟು ಹಬ್ಬವನ್ನು ಭಾನುವಾರ ಅಭಿಮಾನಿಗಳ ಸಮ್ಮುಖದಲ್ಲಿ ಸರಳವಾಗಿ ಆಚರಿಸಿಕೊಂಡರು.
ಬೆಳಿಗ್ಗೆ ತಮ್ಮ ಹುಟ್ಟೂರಾದ ಬೂದಿಹಾಳು ಗ್ರಾಮದ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ನಂತರ ನಗರದ ಗುತ್ತೂರಿನಲ್ಲಿರು ನಾರಾಯಣ ಆಶ್ರಮದಲ್ಲಿ ವಿಶೇಷ ಗೋ ಪೂಜೆ, ಶ್ರೀರಾಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗೋಶಾಲೆಗೆ ಭತ್ತದ ಹುಲ್ಲನ್ನು ದಾನವಾಗಿ ನೀಡಿದರು. ಕ್ಷೇತ್ರನಾಥ ಹರಿಹರೇಶ್ವರ ದೇವಸ್ಥಾನ ಹಾಗೂ ಮಹಜೇನಹಳ್ಳಿ ಊರಮ್ಮದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಇದೆ ವೇಳೆ ಭಾರತೀಯ ಜನತಾ ಪಕ್ಷದ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ಗ್ರಾಮಾಂತರ ಅಧ್ಯಕ್ಷ ಲಿಂಗರಾಜ್, ಪ್ರಧಾನ ಕಾರ್ಯದರ್ಶಿಗಳಾದ ತುಳಜಪ್ಪ, ಮಂಜಾನಾಯ್ಕ್, ವೀರೇಶ್ ಆದಾಪೂರ, ಮಹಾಂತೇಶ, ಮುಖಂಡರಾದ ರಾಜು ರೋಖಡೆ, ಬಾತಿ ಚಂದ್ರಶೇಖರ, ಸುನೀಲ್, ಪಾಪಣ್ಣ, ಪರಶುರಾಮ ಕಾಟ್ವೆ, ಸಂತೋಷÀ ಗುಡಿಮನಿ, ಫೋಟೋ ಸಂತೋಷ, ಚಂದ್ರಕಾAತಗೌಡ, ಶಾಂತರಾಜ್, ಆಟೋರಾಜು, ಅಜ್ಜಪ್ಪ, ಮಾರುತಿ, ರಾಘವೇಂದ್ರ, ಗಂಗಾಧರ ದುರ್ಗೋಜಿ, ರಾಕೇಶ್, ಅಕ್ಷಯ್, ಗಗನ್, ಅನಿಲ್ ಸಾವಂತ್, ಆನಂದ್ ಎ.ಸಿ. ಸೇರಿದಂತೆ ಮುಖಂಡರು ಕಾರ್ಯಕರ್ತರು ಇದ್ದರು.