ಬೆಂಗಳೂರು: ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.90ಕ್ಕೂ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರಕ್ಕಾಗಿ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ (ಕೆಯುಡಬ್ಲ್ಯೂಜೆ) ಅರ್ಜಿ ಆಹ್ವಾನಿಸಿದೆ.
ಜಿಲ್ಲಾ ಸಂಘಗಳಿಂದ ಆಹ್ವಾನಿಸಿದ ಅರ್ಜಿಗಳಲ್ಲಿ ಶೇ.90 ಅಂಕಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಅರ್ಜಿಗಳನ್ನು ಮಾತ್ರ ರಾಜ್ಯ ಸಂಘಕ್ಕೆ ಕಳುಹಿಸಿಕೊಡಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಸಂಘದ ಸದಸ್ಯರ ಮಕ್ಕಳಾಗಿದ್ದು ಉತ್ತಮ ಸಾಧನೆ ಮಾಡಿದ್ದರೆ (ಶೇ.60ಕ್ಕಿಂತ ಹೆಚ್ಚು 90ಕ್ಕಿಂತ ಕಡಿಮೆ) ಸಂಬಂದಿಸಿದ ಆಯಾ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ತಾಲೂಕು ಮತ್ತು ಜಿಲ್ಲಾ ಸಂಘಗಳು ಏರ್ಪಡಿಸಲಿವೆ.
ಕೆಯುಡಬ್ಲ್ಯೂಜೆ ಸದಸ್ಯತ್ವದ ಗುರುತಿನ ಪತ್ರದ ಪ್ರತಿ, ವಿದ್ಯಾರ್ಥಿಯ ಆಧಾರ್ ಪ್ರತಿ, ಮಾರ್ಕ್ಸ ಕಾರ್ಡ ಪ್ರತಿ ಸಹಿತ ಅರ್ಜಿಯನ್ನು ಆಯಾ ಜಿಲ್ಲಾ ಸಂಘದ ದೃಢೀಕರಣ ಸಹಿತ ರಾಜ್ಯ ಸಂಘಕ್ಕೆ ಮೇ 18 ರೊಳಗೆ ಅಧ್ಯಕ್ಷರು, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ, 3ನೇ ಮಹಡಿ, ಕಂದಾಯ ಭವನ, ಕೆ.ಜಿ.ರಸ್ತೆ, ಬೆಂಗಳೂರು-9 ಇಲ್ಲಿಗೆ ಕಳುಹಿಸಲು ಕೋರಲಾಗಿದೆ.