-4.7 C
New York
Tuesday, December 24, 2024

Buy now

spot_img

ಕಲ್ಯಾಣ ಮಂಟಪದಲ್ಲಿ ಕಾರ್ಮಿಕನಿಂದ ಒಳಚರಂಡಿ ಸ್ವಚ್ಛತೆ ಮಾಲೀಕರ ಮೇಲೆ ಪ್ರಕರಣ ದಾಖಲು…!

ದಾವಣಗೆರೆ: ನಗರದ ಕಲ್ಯಾಣ ಮಂಟಪ ಒಂದರಲ್ಲಿ ಕೂಲಿಕಾರ್ಮಿಕರು ಒಬ್ಬರನ್ನು ಒಳಚರಂಡಿ ಸ್ವಚ್ಛಗೊಳಿಸಲು ಚರಂಡಿಗೆ ಇಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೂಲಿ ಕಾರ್ಮಿಕ ಸಿದ್ದೇಶ್ ಅವರನ್ನು ಶ್ರೀಮತಿ ರಾಜನಹಳ್ಳಿ ಜಾನಬಾಯಿ ರಾಜನಹಳ್ಳಿ ಶ್ರೀನಿವಾಸ್ ಮೂರ್ತಿ ಧರ್ಮ ಶಾಲಾ ಕಲ್ಯಾಣ ಮಂಟಪದ ಒಳಚರಂಡಿಗೆ ಇಳಿಸಿ ಸ್ವಚ್ಛತೆ ಮಾಡಿಸಿದ್ದು ಪರಿಶೀಲಿನೆ ವೇಳೆ ಕಂಡುಬಂದಿದೆ ಆದ್ದರಿಂದ ಸಂಬಂಧಪಟ್ಟ ಕಲ್ಯಾಣ ಮಂಟಪದ ಮಾಲೀಕರ ಹಾಗೂ ಮೇಲ್ವಿಚಾರಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮಹಾನಗರ ಪಾಲಿಕೆಯ ಸಹಾಯಕ ಇಂಜಿನಿಯರ್ ಪಿ ಮಧುಸೂದನ್ ಬಡಾವಣೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಒಳಚರಂಡಿ ವ್ಯವಸ್ಥೆಯ ದುರಸ್ತಿ ಬಗ್ಗೆ ಪಾಲಿಕೆಗೆ ದೂರು ಸಲ್ಲಿಸಿದೆ ಕಾರ್ಮಿಕನಿಂದ ಸ್ವಚ್ಛತೆ ಮಾಡಿಸಲಾಗಿದೆ ಈ ಸಂಬಂಧ ಮಾಲೀಕರ ಮೇಲ್ವಿಚಾರಕರು ಹಾಗೂ ಇತರ ವಿರುದ್ಧ
ಮ್ಯಾನ್ಯುಯಲ್ ಸ್ಕ್ಯಾವೆಂಜರ್ ನೇಮಕಾತಿ ನಿಷೇಧ ಮತ್ತು ಪುನರ್ವಸತಿ ಅದಿನಿಯಮ 2013ರ ಕಾಯ್ದೆ ಹಾಗೂ ಸೆಕ್ಷನ್ 20 ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ.

ಕಿರಿಯ ಆರೋಗ್ಯ ನಿರೀಕ್ಷಕ ನಿಖಿಲ್ ಅವರೊಂದಿಗೆ ಕಲ್ಯಾಣ ಮಂಟಪಕೆ ಭೇಟಿ ನೀಡಿದಾಗ ಒಳಚರಂಡಿ ಚೇಂಬರ್ ತೆರೆದಿತ್ತು. ಈ ಸಂಬಂಧ ಕಲ್ಯಾಣ ಮಂಟಪದ ಸೂಪರ್ವೈಸರ್ ಕಾರ್ಮಿಕ ಸಿದ್ದೇಶ್ ಅವರಿಂದ ಒಳಚರಂಡಿ ಸ್ವಚ್ಛಗೊಳಿಸಿರುವುದಾಗಿ ಹೇಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles