-4.7 C
New York
Tuesday, December 24, 2024

Buy now

spot_img

ಗಡಿ ಖ್ಯಾತೆ: ನ.1ರಂದು ‘ಕರಾಳ ದಿನ’ ಆಚರಣೆಗೆ ಎಂಇಎಸ್ ನಿರ್ಧಾರ

ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕರ್ನಾಟಕ-ಮಹಾರಾಷ್ಟç ಗಡಿ ವಿವಾದ ಹಳೆಯದು. ಪ್ರತಿ ವರ್ಷ ನವೆಂಬರ್ ಒಂದರAದು ಕನ್ನಡ ರಾಜ್ಯೋತ್ಸವ ಆಗಮಿಸುತ್ತಿದ್ದಂತೆ ನೆರೆಯ ಮಹಾರಾಷ್ಟç ಗಡಿ ಜಿಲ್ಲೆ ವಿವಾದಕ್ಕೆ ಸಂಬAಧಿಸಿದAತೆ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಅದರಂತೆ ಈ ಬಾರಿಯು ಕೂಡ ಮಹಾರಾಷ್ಟç ಏಕೀಕರಣ ಸಮಿತಿ(MES) ವತಿಯಿಂದ ನವೆಂಬರ್ 1 ರಂದು ಕರಾಳ ದಿನಾಚರಣೆ ಆಚರಿಸಲು ನಿರ್ಧರಿಸಿದ್ದು, ಇದಕ್ಕೆ ಮಹಾರಾಷ್ಟç ಸಿಎಂ ಏಕನಾಥ ಶಿಂಧೆ ಬೆಂಬಲ ಸೂಚಿಸಿದ್ದಾರೆ.

ಮಹಾರಾಷ್ಟç ಮುಖ್ಯಮಂತ್ರಿ ಏಕನಾಥ್ ಶಿಂಧೆ ಬೆಂಬಲ: ಈ ಕರಾಳ ದಿನಾಚಾರಣೆಗೆ ಪ್ರತಿನಿಧಿಗಳನ್ನು ಕಳಿಸುವುದಾಗಿ ಮಹಾರಾಷ್ಟç ಮುಖ್ಯಮಂತ್ರಿ ಏಕನಾಥ ಶಿಂಧೆ ಹೇಳಿಕೆ ನೀಡಿದ್ದಾರೆ. ನಾಡದ್ರೋಹಿ ಎಂಇಎಸ್ ಕರಾಳ ದಿನಾಚರಣೆಗೆ ಮಹಾರಾಷ್ಟç ಮುಖ್ಯಮಂತ್ರಿ ಬೆಂಬಲ ಸೂಚಿಸಿದ್ದಾರೆ. ಕರಾಳ ದಿನಾಚರಣೆಗೆ ಬೆಳಗಾವಿ ಡಿಸಿ ನಿತೇಶ್ ಪಾಟೀಲ್ ಅನುಮತಿಯನ್ನು ನೀಡಿಲ್ಲ.
ನವೆಂಬರ್ 1 ರಂದು ಕರಾಳ ದಿನ ಆಚರಣೆ ಮಾಡದಂತೆ ಎಂಇಎಸ್ ಕಾರ್ಯಕರ್ತರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಸಿ ನಿತೀಶ್ ಎಚ್ಚರಿಕೆ ನೀಡಿದ್ದಾರೆ.ಅಲ್ಲದೆ ಮಹಾರಾಷ್ಟç ನಾಯಕರಿಗೂ ಬೆಳಗಾವಿ ಪ್ರವೇಶ ನಿರ್ಬಂಧಿಸುವ ಎಚ್ಚರಿಕೆಯನ್ನು ರಾಜೋತ್ಸವ ಪೂರ್ವಭಾವಿ ಸಭೆಯಲ್ಲಿ ಡಿಸಿ ನಿತೀಶ್ ಎಚ್ಚರಿಕೆ ನೀಡಿದ್ದರು.
ಮಹಾರಾಷ್ಟç ನಾಯಕರನ್ನು ಕರಾಳ ದಿನಾಚರಣೆಗೆ ಕಳುಹಿಸುವುದಾಗಿ ಸಿಎಂ ಶಿಂಧೆ ಹೇಳಿರುವ ಹಿನ್ನೆಲೆಯಲ್ಲಿ ಎಂಇಎಸ್ ಮುಖಂಡರು ಸಭೆ ಕರೆದು ಕರಾಳ ದಿನಾಚರಣೆ ಕುರಿತು ಚರ್ಚೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲೆಯೊಳಗೆ ಸಂಸದ ಧೈರ್ಯಶೀಲ ಮಾನೆ, ಮಹಾರಾಷ್ಟçದ ಗಡಿ ಉಸ್ತುವಾರಿ ಸಚಿವರನ್ನು ಕರೆತರಲು ಯೋಜನೆ ಮಾಡಿಕೊಂಡಿದ್ದಾರೆ.

ಕರಾಳ ದಿನಾಚರಣೆಗೆ ಅವಕಾಶ ಕೊಡಬಾರದು: ಗಡಿ ಭಾಗದಲ್ಲಿ ಮಹಾರಾಷ್ಟç ಸರ್ಕಾರ ಕಚೇರಿ ಆರಂಭ ಮಾಡುತ್ತಿದೆ. ಇದರಿಂದ ಗಡಿ ಭಾಗದ ಮರಾಠಿಗರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದೆ. ಕೂಡಲೇ ಸರ್ಕಾರದ ಗಮನಕ್ಕೆ ತಂದು ಅದಕ್ಕೆ ತಡೆ ಹಾಕಬೇಕು. ಕರಾಳ ದಿನಾಚರಣೆಗೆ ಅವಕಾಶ ಕೊಡಬಾರದು. ಡಿಸಿ ಮೂಲಕ ಸರ್ಕಾರಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ರಾಜ್ಯ ಸಂಚಾಲಕ ಮಹಾದೇವ ತಳವಾರ ಮನವಿ ಸಲ್ಲಿಸಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles