-3.1 C
New York
Tuesday, December 24, 2024

Buy now

spot_img

ಹರಿಹರ: ನಿಯಮ ಉಲ್ಲಂಘಿಸಿ ಅಧಿಕ ತೂಕ; ಬಾಡಿ ಮಟ್ಟಕ್ಕಿಂತ ಎತ್ತರಕ್ಕೆ ಕಲ್ಲು ಜಲ್ಲಿ ಟಿಪ್ಪರ್ ತುಂಬಿದ ವಾಹನ ಸಂಚಾರ

ಹರಿಹರ: ನಗರ ಸೇರಿದಂತೆ ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಅಧಿಕ ತೂಕದ ವಾಹನಗಳು ಸಂಚಾರ ಮಾಡುತ್ತಿದ್ದರೂ ಸಂಬಂಧಪಟ್ಟ ಸಾರಿಗೆ ಇಲಾಖೆ ಯಾವುದೇ ಕ್ರಮಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಇಟ್ಟಿಗೆ ಫ್ಯಾಕ್ಟರಿಗಳು ಹಾಗೂ ಬಿಳಿಕಲ್ಲು ಗಣಿಗಳಿಂದ ಪ್ರತಿದಿನವೂ ನೂರಾರು  ಟಿಪ್ಪರ್ ಲಾರಿಗಳು ನಿಗದಿತ ಪ್ರಮಾಣಕ್ಕಿಂತ ಅಧಿಕ ತೂಕದ ಮಣ್ಣು, ಮರಳು, ಕಲ್ಲು, ಜಲ್ಲಿ ತುಂಬಿಕೊಂಡು ಅತಿವೇಗವಾಗಿ ಸಾಗುತ್ತಿವೆ. 45-50 ಟನ್ ತೂಕದ ಕಲ್ಲು, ಜಲ್ಲಿ, ಮರಳು ಹೊತ್ತ ಟಿಪ್ಪರ್‌ ಲಾರಿಗಳು ಓಡಾಡುವುದರಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ಎಲ್ಲ ರಸ್ತೆಗಳೂ ಬಹುತೇಕ ಹಾಳಾಗುತ್ತಿವೆ. ಟಿಪ್ಪರ್‌ಗಳು ಓಡಾಡುವ ರಸ್ತೆಗಳ ಡಾಂಬರುಗಳು ಕಿತ್ತು ಬಂದು ಎಲ್ಲೆಂದರಲ್ಲಿ ಹಳ್ಳಗುಂಡಿಗಳು ಬಿದ್ದಿವೆ.

ನಿಯಮಬಾಹಿರವಾಗಿ ಮಣ್ಣು ಗಣಿಗಾರಿಕೆ ಹಾಗೂ ಕಲ್ಲು ಸಾಗಣೆ ನಡೆಯುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ, ಪ್ರಾದೇಶಿಕ ಸಾರಿಗೆ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ತಾಲೂಕಿನಲ್ಲಿ ಗಣಿಗಾರಿಕೆ ನಡೆಸುತ್ತಿರುವ ಕೆಲವೇ ಉದ್ಯಮಿಗಳ ಹಿತ ಕಾಪಾಡುತ್ತಿದ್ದಾರೆ. ಕೆಲವೇ ಜನರ ಹಿತಾಸಕ್ತಿಯಿಂದ ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಿಸಿದ ರಸ್ತೆಗಳು ಹಾಳಾಗುತ್ತಿವೆ. ಅಲ್ಲದೇ, ಸಾರ್ವಜನಿಕರ ತೆರಿಗೆಯ ಹಣ ಪೋಲಾಗುತ್ತಿದ್ದು, ಕೂಡಲೇ ಇದನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು.

ಒಂದೇ ಪರ್ಮಿಟ್ ಬಳಸಿ ಗಣಿಗಳಿಂದ ಕಲ್ಲುಸಾಗಣೆ ಮಾಡುತ್ತಿದ್ದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಇತ್ತ ತಲೆಹಾಕುತ್ತಿಲ್ಲ.

ಆದರೆ, ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಹಳೆಯ ರಸ್ತೆಗಳಲ್ಲಿ ಗರಿಷ್ಠ 10 ರಿಂದ 12 ಟನ್ ತೂಕದ ವಾಹನಗಳ ಸಂಚಾರಕ್ಕೆ ಮಾತ್ರ ಯೋಗ್ಯವಾಗಿದ್ದರೂ 45-50ಟನ್ ತೂಕದ ಟಿಪ್ಪರ್‌ಗಳ ಓಡಾಟ ನಿರಂತರವಾಗಿ ನಡೆಯುತ್ತಿದೆ. ಇದರಿಂದ ಶಿವಮೊಗ್ಗ- ಹೊಸಪೇಟೆ ಹೆದ್ದಾರಿಗಳಲ್ಲಿ ಬರುವ ತಾಲ್ಲೂಕಿನ ಗ್ರಾಮಗಳಾದ ಗೂತ್ತುರು, ಕರಲಹಳ್ಳಿ, ಬೆಳ್ಳೂಡಿ ಹಾಗೂ ಜಿಲ್ಲಾ ಮುಖ್ಯಾ ರಸ್ತೆಗಳಲ್ಲಿ ರಾಜನಹಳ್ಳಿ, ಧೊಳೆಹೊಳೆ, ಇಂಗಳಗೂಂದಿ, ಬಿಳಸನೂರು, ನಂದಿಗಾವಿ, ಸಾರಥಿ, ಚಿಕ್ಕಬಿದರಿ ರಸ್ತೆಯಲ್ಲಿ ದೊಡ್ಡ ದೊಡ್ಡ ಹಳ್ಳ ಬಿದ್ದು ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ.

ಎಂ. ಸ್ಯಾಂಡ್ ಸಾಗಾಣಿಕೆ ಮಾಡುವ ಟ್ರಾಕ್ಟರ್ ಮತ್ತು ಟಿಪ್ಪರ್ ಲಾರಿಗಳು ಹಾವಳಿ: ವಾಹನಗಳು ನಿಯಮವನ್ನು ಗಾಳಿಗೆ ತೂರಿ, ರಾಜಾ ರೋಷಾವಾಗಿ ನಗರದಲ್ಲಿ ಸಂಚರಿಸುತ್ತಿವೆ.

ಸಂಚಾರಿ ನಿಯಮ ಉಲ್ಲಂಘನೆ:- ನಗರದಲ್ಲಿ ಎಂ ಸ್ಯಾಂಡ್ ತುಂಬಿದ ಟಿಪ್ಪರ್ ಲಾರಿಗಳು ಸಂಚಾರಿ ನಿಯಮವನ್ನು ಉಲ್ಲಂಘಿಸಿ ಸಂಚರಿಸುತ್ತಿವೆ. ಎಂ.ಸ್ಯಾಂಡ್ ತುಂಬಿ ಸಾಗಾಣಿಕೆ ವಾಹನಗಳು ಕಡ್ಡಾಯವಾಗಿ ಟಾರ್ಪಲ್ ಬಳಕೆ ಮಾಡಬೇಕು ನಿಯಮವಿದ್ದರು ಅದನ್ನು ಗಾಳಿಗೆ ತೂರಲಾಗಿದೆ. ಅಂತಹ ವಾಹನಗ ಳಿಗೆ ದಂಡವನ್ನೂ ವಿಧಿಸಲಾ ಗುತ್ತಿದೆ. ಸಂಚಾರಿ ನಿಯಮಗಳನ್ನು ಪಾಲಿಸದ ವಾಹನಗಳನ್ನು ಮುಟ್ಟುಗೊಲು ಹಾಕಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ವಾಹನಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರ ಆಗ್ರಹ ಮಾಡಿದ್ದಾರೆ.

ಜಮೀನುಗಳಿಂದ ಮಣ್ಣುನ್ನು ಬಾಡಿ ಮಟ್ಟಕ್ಕಿಂತಲೂ ಎತ್ತರಕ್ಕೆ ತುಂಬಿಕೊಂಡು ಮೇಲೆ ಏನನ್ನೂ ಮುಚ್ಚದೆ ಇಟ್ಟಿಗೆ ಫ್ಯಾಕ್ಟರಿಗೆ ಸಾಗಿಸಲಾಗುತ್ತಿದೆ. ಇದರಿಂದ ಹೊರಚೆಲ್ಲಿದ ಧೂಳು ವಾಹನ ಸವಾರರ ಕಣ್ಣಿಗೆ ಬಿದ್ದು ತೊಂದರೆಯಾಗುತ್ತಿದೆ. ಕ್ರಷರ್‌ಗಳಿಂದ ಗ್ರಾಹಕರಿಗೆ ಎಂ-ಸ್ಯಾಂಡ್, ಜಲ್ಲಿಯನ್ನು ಸಾಗಿಸಲು ದಿನಕ್ಕೆ ಸುಮಾರು 50 ರಿಂದ 60 ಟಿಪ್ಪರ್‌ ಲಾರಿಗಳು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಕೃಷಿ ಉದ್ದೇಶಕ್ಕೆ ತೆರಿಗೆ ವಿನಾಯಿತಿ ಪಡೆದ ಜಮೀನುಗಳು ಮಾಲೀಕರು ವಾಣಿಜ್ಯ ಉದ್ದೇಶಗಳಿಗೆ ಬಳಸಿ ಹಾಡಹಗಲೇ ಫಲವತ್ತಾದ ಮಣ್ಣುನ್ನು ಲಾರಿಗಳಿಗೆ ತುಂಬಿಸುತ್ತಿದ್ದಾರೆ. ಸಂಭಂದಿಸಿದ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles