-3.1 C
New York
Tuesday, December 24, 2024

Buy now

spot_img

ಹರಿಹರ ನಗರಸಭೆ ಸಾಮಾನ್ಯ ಸಭೆ

ಹರಿಹರ: ಮಂದಿರ, ಮಸೀದಿ, ಚರ್ಚ್, ಮಠಗಳಂತೆ ೨೪*೭ ನೀರನ್ನು ರಿಯಾಯಿತಿ ನೀಡಿ ಎಂದು ಆಗ್ರಹಿಸಿದರು. ಈ ಕುರಿತು ಪರಿಶೀಲನೆ ನಡೆಸಲಾಗುವುದೆಂದು ಪೌರಾಯುಕ್ತರು ಭರವಸೆ ನೀಡಿದರು. ಶುದ್ದ ಕುಡಿಯುವ ನೀರು ಘಟಕದಿಂದ ನೀರನ್ನು ಜನರಿಗೆ ತಲುಪಿದಿಯೇ ಎಂದು ಸಭೆಯಲ್ಲಿ ಶಂಕರ್ ಖಟಾವ್‍ಕರ್ ಉಸ್ತುವಾರಿ ಮಾಡುವ ಸಂಸ್ಥೆಯವರು, ನಗರಸಭೆ ಅಧಿಕಾರಿಗಳು ಏನು ಪರಿಶೀಲನೆ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.

ನಗರಸಭೆ ಸಭಾಂಗಣದಲ್ಲಿ ನಗರಸಭಾಧ್ಯಕ್ಷೆ ನಿಂಬಕ್ಕ ಚಂದಾಪೂರ್ ಅವರ ಅಧ್ಯಕ್ಷಯತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹತ್ತಾರು ಸದಸ್ಯರು ಪೌರಾಯುಕ್ತ ಐ ಬಸವರಾಜ್ ರವರಿಗೆ ಹೀಗೆ ತಾಕೀತು ಮಾಡಿದರು.

ಹಿರಿಯ ಸದಸ್ಸ ಎ. ವಾಮನ್ ಮೂರ್ತಿ ಮಾತನಾಡಿ ಜಲಸಿರಿ ಅಯೋಮಯ: 24 ಗಂಟೆ ನೀರು ಒದಗಿಸುವ ಜಲಸಿರಿ ಕಾಮಗಾರಿಯ, ನದಿ ಒಣಗಿದಾಗ ನೀರೆಲ್ಲಿಂದ ಕೊಡುತ್ತೀರಿ ಎಂಬ ಪ್ರಶ್ನೆಗೆ ಜಲಸಿರಿ, ನಗರಸಭೆ ಅಧಿಕಾರಿಗಳ ಬಳಿ ಉತ್ತರವಿಲ್ಲ. ಮೊದಲು ನದಿಗೆ ರಾಜನಹಳ್ಳಿ ಗ್ರಾಮದ ಬಳಿ ೨ ಎಕರೆ ಜಮೀನು ಖರೀದಿ ಮಾಡಿ ನಂತರ ಬ್ಯಾರೇಜ್ ನಿರ್ಮಿಸಿ ನಂತರ ಯೋಜನೆ ಕಾಮಗಾರಿ ಕೈಗೊಳ್ಳಿ ಎಂದು ಸಭೆಗೆ ತಿಳಿಸಿದರು.

ದೂಡಾದವರು ಹರಿಹರದವರನ್ನು ಕೇವಲ ವಿವಿಧ ಶುಲ್ಕ ಪಾವತಿಗೆ ಮಾತ್ರ ಉಪಯೋಗಿಸಿಕೊಳ್ಳುತ್ತಿದ್ದಾರೆ, ನಗರದಲ್ಲಿ ಒಂದೂ ಅಭಿವೃದ್ಧಿ ಕಾಮಗಾರಿ ಮಾಡಿಸಿಲ್ಲ.

ಸದಸ್ಸ ವಸಂತ ಮಾತನಾಡಿ ದೂಡಾದವರು ಹರಿಹರದವರನ್ನು ಕೇವಲ ವಿವಿಧ ಶುಲ್ಕ ಪಾವತಿಗೆ ಮಾತ್ರ ಉಪಯೋಗಿಸಿಕೊಳ್ಳುತ್ತಿದ್ದಾರೆ, ನಗರದಲ್ಲಿ ಒಂದೂ ಅಭಿವೃದ್ಧಿ ಕಾಮಗಾರಿ ಮಾಡಿಸಿಲ್ಲ. ಹರಿಹರದವರು ದೂಡಾಕ್ಕೆ ಏನು ದ್ರೋಹ ಮಾಡಿದ್ದಾರೆ. ಅವರೇಕೆ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ. ಒಂದು ಬಿಲ್ಡಿಂಗ್ ಲೈಸೆನ್ಸ್, ಏಕ ನಿವೇಶನ ಯಾವುದೆ ಕೆಲಸಕ್ಕೆ ಹೋದರೂ ತಕರಾರು, ಅಸಹಕಾರ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles