ಚಿತ್ರದುರ್ಗ : ಎಸ್.ಜೆ.ಎಂ. ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ದಿನಾಂಕ:20.10.2023 ರಂದು ಐಕ್ಯೂಎಸಿ ಮತ್ತು ವಾಣಿಜ್ಯ ವಿಭಾಗದ ಅಡಿಯಲ್ಲಿ ಬಿ.ಕಾಂ. ವಿದ್ಯಾರ್ಥಿಗಳಿಗೆ “ಯುವ ಶಕ್ತಿಗೆ ಬಂಡವಾಳ ಹೂಡಿಕೆಯ ಅರಿವು” ಈ ವಿಷಯ ಕುರಿತು ಒಂದು ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ಚೈತನ್ಯ ಎಸ್. ಕಿತ್ತೂರು ಸಹ ಪ್ರಾಧ್ಯಾಪಕರು Sindhi Institute of Management, Bangalore, ಇವರು ಈ ಕಾರ್ಯಗಾರವನ್ನು ಉದ್ದೇಶಿಸಿ ಯುವ ಸಮುದಾಯದ ಬಂಡವಾಳ ಹೂಡಿಕೆಗೆ ಹೆಚ್ಚಿನ ಒತ್ತನ್ನು ನೀಡಬೇಕೆಂದು ತಿಳಿಸಿದರು. ಬಂಡವಾಳವನ್ನು ಯಾವ ಯಾವ ಕ್ಷೇತ್ರದಲ್ಲಿ ಹೂಡಬಹುದು ಉದಾಹರಣೆಗೆ ವ್ಯಾಪಾರ, ವಹಿವಾಟು, ಉದ್ದಿಮೆ ದೀರ್ಘಕಾಲದ ಹೂಡಿಕೆ ಹೇಗೆ ಮಾಡಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಎಲ್ಲಾ ವಿದ್ಯಾರ್ಥಿಗಳು ಬಂಡವಾಳ ಹೂಡಿಕೆಗೆ ಹೆಚ್ಚಿನ ಆಸಕ್ತಿ ವಹಿಸಬೇಕು.
ಬಂಡವಾಳ ಹೂಡಿಕೆ ಮಾಡಿ ಲಾಭ ನಿರೀಕ್ಷೆ ಮಾಡುವ ವ್ಯವಹಾರ ಜ್ಞಾನ ಬೆಳೆಸಿಕೊಳ್ಳಬೇಕು, ಬಂಡವಾಳ ಹೂಡಿಕೆಗೆ ಯಾವುದೇ ರೀತಿಯ ವಂಚನೆ ಆಗದೆ ಪೂರ್ವಪರ ಮಾಹಿತಿಯನ್ನು ತಿಳಿಯದೇ ಕಂಪನಿಗಳಿಗೆ ಬಂಡವಾಳ ಹೂಡುವುದು ಅಷ್ಟು ಸೂಕ್ತವಲ್ಲ. SEBI ಕಾರ್ಯ ನಿರ್ವಹಿಸುತ್ತಿರುವುದು ಷೇರು ಮಾರುಕಟ್ಟೆಯಲ್ಲಿ ಬಂಡವಾಳದ ಹೂಡಿಕೆಯ ಲಾಭ ನಿರೀಕ್ಷಿಸುವ ಮೂಲಕ ಸೂಚ್ಯಂಕದ ಏರಿಕೆಯನ್ನು ಅವಲಂಬಿಸಿರುತ್ತದೆ. ಅದರ ಏರಿಳಿತ ಬಂಡವಾಳ ಹೂಡಿಕೆಗೆ ಆಪತ್ತು ತಂದೊಡ್ಡಬಹುದು. ಬಂಡವಾಳ ಹೂಡಿಕೆಯಿಂದ ಹೆಚ್ಚಿನ ಲಾಭಾಂಶ ನಿರೀಕ್ಷೆ ಮಾಡುವ ಮೂಲಕ ಕಂಪನಿಗಳಿಂದ ಬಂಡವಾಳ ಹೂಡಿಕೆಯ ಜ್ಞಾನ ಯುವಶಕ್ತಿಗೆ ಅತ್ಯವಶ್ಯಕ ಎಂದು ಕಾರ್ಯಗಾರದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಪ್ರಾಂಶುಪಾಲರಾದ ಡಾ. ಎಲ್. ಈಶ್ವರಪ್ಪ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಕಾರ್ಯಗಾರದ ಉಪಯೋಗವನ್ನು ಎಲ್ಲಾ ವಿದ್ಯಾರ್ಥಿ ಸಮುದಾಯ ಸದುಪಯೋಗ ಪಡೆದುಕೊಳ್ಳಬೇಕೆಂದು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ ತಿಳಿಸಿದರು.
ಇದೆ ವೇಳೆ ಐಕ್ಯೂಎಸಿ ಸಂಚಾಲಕರಾದ ಶ್ರೀ ಎಂ.ಎಸ್. ಪರಮೇಶ್ವರ, ವಾಣಿಜ್ಯಶಾಸ್ತç ವಿಭಾಗದ ಕುಮಾರ್ ಜಿ. ಮಿಸಬಾಖಾನುಂ, ಮಧು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಪ್ರಾರ್ಥನೆ: ಕು. ಉಷಾ ದ್ವಿತೀಯ ಬಿ.ಕಾಂ. ಸ್ವಾಗತ : ಕು. ಯಶಸ್ವಿನಿ ತೃತೀಯ ಬಿ.ಕಾಂ. ಪ್ರಾಸ್ತಾವಿಕ ನುಡಿ : ರಮ್ಯ ಎಸ್. ವಾಣಿಜ್ಯಶಾಸ್ತç ಉಪನ್ಯಾಸಕರು ನಿರೂಪಣೆ : ಶ್ರೀಮತಿ ಶ್ವೇತ ಬಿ.ವೈ. ಮುಖ್ಯಸ್ಥರು, ವಾಣಿಜ್ಯಶಾಸ್ತç ವಿಭಾಗ ವಂದನಾರ್ಪಣೆ: ಕು. ಕೀರ್ತಿ ತೃತೀಯ ಬಿ.ಕಾಂ.