ದಾವಣಗೆರೆ ಅ. 20: ಲಿಡಕರ್ ನಿಗಮದ ವತಿಯಿಂದ ದಸರಾ ಮತ್ತು ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 18 ರವರೆಗೆ ಅಪ್ಪಟ ಚರ್ಮದ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ.
ಹೊಸ ಮಾದರಿಯ ಅಪ್ಪಟ ಚರ್ಮದ ಪಾದರಕ್ಷೆ, ಶೂ, ಬೆಲ್ಟ್, ಪರ್ಸ್, ವ್ಯಾನಿಟಿ ಬ್ಯಾಗ್ ಗಳು ಶೇ.20 ರಷ್ಟು ರಿಯಾಯಿತಿಯಲ್ಲಿ ಲಭ್ಯವಿರುತ್ತದೆ. ಗ್ರಾಹಕರು ನಗರದ ಎ.ವಿ.ಕೆ ಕಾಲೇಜು ರಸ್ತೆಯಲ್ಲಿರುವ ಟೆನ್ನಿಸ್ ಕೋರ್ಟ್ ಹಿಂಬಾಗದಲ್ಲಿರುವ ಲಿಡಕರ್ ಲೆದರ್ ಎಂಪೋರಿಯA ಮಳಿಗೆಗೆ ಭೇಟಿ ನೀಡಿ ವಸ್ತುಗಳನ್ನು ಖರೀದಿಸಬಹುದು ಎಂದು ಲಿಡಕರ್ ನಿಗಮದ ಜಿಲ್ಲಾ ಸಂಯೋಜಕ ಹಾಗೂ ವ್ಯವಸ್ಥಾಪಕ ಗಂಗಾಧರ್ ತಿಳಿಸಿದ್ದಾರೆ.