ಭರಮಸಾಗರ: ಮಾನವ ಜನಾಂಗಕ್ಕೆ ಶರೀರವೆಂಬ ವರವನ್ನು ದೇವರು ನೀಡಿದ್ದಾನೆ ಅದನ್ನು ಹಾಳು ಮಾಡಿಕೊಳ್ಳಬಾರದು ಎಂದು ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಬಸವಪ್ರಭು ಸ್ವಾಮೀಜಿ ಹೇಳಿದ್ದಾರೆ.
ಇಲ್ಲಿನ ಬಸವೇಶ್ವರ ಸಮುದಾಯ ಭವನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 1738ನೇ ಮದ್ಯವರ್ಜನ ಶಿಬಿರದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಈ ದೇಹದಿಂದ ಸಾಧನೆ , ಕಾಯಕ ಮಾಡಿ ಜೀವನ ಮಾಡಬೇಕು ಅದಕ್ಕಾಗಿ ದೇಹ ಚೆನ್ನಾಗಿ ಇರಬೇಕು ಚಟಗಳಿಗೆ ದಾಸರಾಗಬಾರದು ಈ ವಿಚಾರದಲ್ಲಿ ಶ್ರೀ ಮಠದ ವತಿಯಿಂದ ನಾವು ಜಯದೇವ ಜೋಳಿಗೆ ಎಂಬ ಕಾರ್ಯಕ್ರಮದ ಮೂಲಕ ಜನರಲ್ಲಿ ದುಶ್ಚಟ ಬಿಡುವ ಬಿಕ್ಷೆಯನ್ನು ಬೇಡುವ ಕೆಲಸ ಮಾಡಲಾಗುತ್ತಿದೆ.
ದೇಹ ಒಂದು ಕಬ್ಬಿಣದ ಅಲ್ಮೇರ ಇದ್ದಹಾಗೆ ಅನಗತ್ಯ ದುಶ್ಚಟಗಳಿಗೆ ಬಲಿಯಾಗಿ ಅಲ್ಮೇರವಾನ್ನು ತ್ಯಾಜ್ಯ ವಸ್ತುಗಳನ್ನು ಇಡುವ ಸ್ಥಳವನ್ನಾಗಿಸಬಾರದು, ಒಮ್ಮೆ ಕೆಟ್ಟ ಆರೋಗ್ಯ ಮರಳಿ ಬರುವುದಿಲ್ಲ, ಈ ಶಿಬಿರವು ನಿಮಗೆ ಹೊಸಜೀವನ ಕೊಟ್ಟಿದೆ ಇನ್ನುಮುಂದೆ ಸಂತರಾಗಿ ಶರಣರಾಗಿ ಸಂಸ್ಕೃತವAತರಾಗಿ ಬಾಳಿರಿ ಎಂದರು.
ಯೋಜನಾಧಿಕಾರಿ ನಾಗರಾಜ್ ಕುಲಾಲ್ ಕುಟುಂಬ ಕಾರ್ಯಕ್ರಮದ ನೇತೃತ್ವ ವಹಿಸಿ ಶಿಬಿರಾರ್ಥಿಗಳನ್ನುದ್ದೇಶಿಸಿ ಶ್ರೀಕ್ಷೇತ್ರ ಧರ್ಮಸ್ಥಳದಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ನಿಮ್ಮ ಕುಟುಂಬದ ಉಸಿರಾಗಿದೆ. ಮದ್ಯಪಾನ ಮಾಡುವುದೆಂದರೆ ಒಳಗಿನ ದೇವರನ್ನು ಹೊರಗೆ ಕಳುಹಿಸಿದಂತೆ, ಮದ್ಯಪಾನ ಬಿಡುವುದೆಂದರೆ ಹೊರಗಿನ ದೇವರನ್ನು ಮನೆಯೊಳಗೆ ಕರೆತಂದಂತೆ, ಕಾರಣ ಕುಡಿತ ಬಿಟ್ಟು ಸಾಧನೆ ಹಾದಿ ಹಿಡಿಯಬೇಕು ಸಾಧನೆ ಸಾಧಕನ ಸೊತ್ತಾಗಬೇಕು, ವ್ಯಸನ ಮುಕ್ತರಾಗಿ ತಮ್ಮ ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರ ಕೊಟ್ಟು ನವ ಜೀವನ ಮಾಡಬೇಕು ಈ ಶಿಬಿರ ನಿಮಗೆ ಮಾತ್ರವಲ್ಲ ನಿಮ್ಮ ಮಕ್ಕಳ ಭವಿಷ್ಯಕ್ಕೂ ನಾಂದಿಯಾಗಿದೆ ಬದುಕು ಬದಲಾವಣೆಗೆ ಸದಾ ತುಡಿತ ಇಟ್ಟುಕೊಂದು ಶಿಬಿರದಲ್ಲಿ ಕಲಿತ ಎಲ್ಲಾ ಅಭ್ಯಾಸಗಳನ್ನು ರೂಢಿಸಿಕೊಂಡು ಎಂದಿಗೂ ದುಶ್ಚಟಗಳ ಕಡೆ ವಾಲದಂತೆ ಎಚ್ಚರವಹಿಸಬೇಕು, ಸಂಸ್ಥೆ ಉತ್ತಮ ಕೆಲಸಗಳಿಗೆ ಸದಾ ನಿಮ್ಮ ಜೊತೆ ಸಂಗಾತಿಯಾಗಿರುತ್ತದೆ ಎಂದರು.