ಮಲೇಬೆನ್ನೂರು: ಪೊಲೀಸ್ ಠಾಣೆ ವ್ಯಾಪ್ತಿಯ ಅದಾಪುರ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಇಸ್ಫೀಟ್ ಜೂಜಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಶ್ರೀ ಬಿ.ಎಸ್.ಬಸವರಾಜ್ ಪೊಲೀಸ್ ಉಪಾಧೀಕ್ಷಕರವರು, ದಾವಣಗೆರೆ ಗ್ರಾಮಾಂತರ ಉಪ ವಿಭಾಗ ರವರ ಹಾಗೂ ಶ್ರೀ ಸುರೇಶ್ ಸಗರಿ, ಪೊಲೀಸ್ ನಿರೀಕ್ಷಕರವರ ಮಾರ್ಗದರ್ಶನದಲ್ಲಿ ಶ್ರೀ ಪ್ರಭು ಡಿ ಕೆಳಗಿನಮನಿ ಪಿಎಸ್ಐ ಮಲೇಬೆನ್ನೂರು ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡ ದಾಳಿ ಮಾಡಿ,
ಜೂಜಾಟದಲ್ಲಿ ತೊಡಗಿದ್ದ 07 ಜನರನ್ನು ಹಿಡಿದು, ಜೂಜಾಟದಲ್ಲಿ ತೊಡಗಿಸಿದ್ದ 9940/- ರೂ ನಗದನ್ನು ವಶಪಡಿಸಿಕೊಂಡಿದ್ದು ಈ ಸಂಬಂಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ಸದಾಳಿಯಲ್ಲಿ ಭಾಗವಹಿಸಿದ ಅಧಿಕಾರಿ ಸಿಬ್ಬಂಧಿಗಳನ್ನು ಎಸ್ ಪಿ ಉಮಾ ಪ್ರಶಾಂತ್ ರವರು ಪ್ರಶಂಸಿಸಿರುತ್ತಾರೆ.