ದಾವಣಗೆರೆ : ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಕ್ಲಸ್ಟರ್ ಮಟ್ಟದ ಹಿರಿಯ ಪ್ರಾಥಮಿಕ ಶಾಲೆ ವಿಭಾಗ ಪ್ರೌಢ ಶಾಲಾ ಹಂತದ ವೈಯುಕ್ತಿಕ ಕ್ರೀಡಾಕೂಟದಲ್ಲಿ ನಗರದ ಪ್ರತಿಷ್ಠಿತ ಶಾಲೆಗಳಲ್ಲೊಂದಾದ ಶ್ರೀ ಸೋಮೇಶ್ವರ ವಿದ್ಯಾಲಯದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿ ಕೀರ್ತಿ ತಂದಿದ್ದಾರೆ.
ಪ್ರೌಢ ಶಾಲಾ ಹಂತದ ವೈಯಕ್ತಿಕ ಕ್ರೀಡೆಗಳಾದ ಹರ್ಡಲ್ಸ್ ಉದ್ದ ಜಿಗಿತದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ. 400, 800 ಹಾಗೂ ಸರಪಳಿ, ಓಟ, ಚಕ್ರ ಎಸೆತದಲ್ಲಿ ತಲಾ ಪ್ರಥಮ ದ್ವಿತೀಯ ಬಹುಮಾನಗಳನ್ನು ಪಡೆದು ಅಮೋಘ ಸಾಧನೆ ಮಾಡಿ ಕ್ರೀಡಾ ಕಲಿಗಳಾಗಿ ಹೊರಹೊಮ್ಮಿದ್ದಾರೆ. ಇನ್ನು ಕ್ಲಸ್ಟರ್ ಮಟ್ಟದ ಬಾಲಕರ ವಿಭಾಗದ ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದರೆ ರಿಲೇ ಉದ್ದ ಜಿಗಿತ, ಗುಂಡು ಎಸೆತ ಎತ್ತರ ಜಿಗಿತ ಹಾಗೂ 600 ಮೀಟರ್ ಓಟದ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಬಹುಮಾನ ಪಡೆದು ಬಾಲಕಿಯರ ಕ್ರೀಡಾ ಕ್ಷೇತ್ರದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಉಳಿದಂತೆ ಗುಂಪು ಆಟಗಳಾದ ವಾಲಿಬಾಲ್, ಥ್ರೋ ಬಾಲ್ ಹಾಗೂ ಖೋ ಖೋ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದಿದ್ದಾರೆ. ತಾಲ್ಲೂಕು ಹಂತದಲ್ಲಿ 400 ಮೀಟರ್ ಹರ್ಡಲ್ಸ್, ಗುಂಡು ಎಸೆತ ಚದುರಂಗ, ಕರಾಟೆ ಸ್ಪರ್ಧೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದಿದ್ದಾರೆ. ಚದುರಂಗದಲ್ಲಿ ದೀಕ್ಷಿತ್, ಶಶಾಂಕ್, ದೀಕ್ಷಿತ ಉತ್ತಮ ಸಾಧನೆ ಮಾಡಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಹರ್ಡಲ್ಸ್ ನಲ್ಲಿ ಸಾಗರ್, 400 ಮೀಟರ್ ಓಟದಲ್ಲಿ ಚಿರಂತನ ಹಾಗೂ ಗುಂಡು ಎಸೆತದಲ್ಲಿ ನವ್ಯ ಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತಂದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿ ಪ್ರೋತ್ಸಾಹಿಸಲಾಯಿತು. ಈ ವೇಳೆ ಶಾಲೆಯ ಪ್ರಾಂಶುಪಾಲರಾದ ಎನ್ ಪ್ರಭಾವತಿ, ಶೈಕ್ಷಣಿಕ ನಿರ್ದೇಶಕರಾದ ಪರಮೇಶ್ವರಪ್ಪ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕಿಯಾದ ಇಂದ್ರಮ್ಮ, ರಾಹುಲ್ ಹಾಗೂ ಶರ್ಮಿಳಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದದರು.