ಬಾಳೆಹೊನ್ನೂರು,ಅ1: ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ 2024ನೇ ಸಾಲಿನ ಅಕ್ಟೋಬರ್ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿದೆ.
ಅಕ್ಟೋಬರ್ 3ರಿಂದ 12ರ ವರೆಗೆ ಗದಗ ಜಿಲ್ಲೆ ರೋಣ ತಾಲೂಕ ಅಬ್ಬಿಗೇರಿಯಲ್ಲಿ ತಮ್ಮ 33ನೇ ವರ್ಷದ ದಸರಾ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸುವರು. 16ರಂದು ಬಾಳೆಹೊನ್ನೂರು ಶ್ರೀ ಪೀಠದಲ್ಲಿ ವಾಸ್ತವ್ಯ ಇದ್ದು ಭಕ್ತಾಧಿಗಳಿಗೆ ದರ್ಶನಾಶೀರ್ವಾದ ನೀಡುವರು. 24ರಂದು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕ ಮಾವಿನಹಳ್ಳಿಯಲ್ಲಿ ಇಷ್ಟಲಿಂಗ ಪೂಜಾ, 25ರಂದು ಹರಿಹರ ತಾಲೂಕ ಸಾಲಕಟ್ಟಿ ಗ್ರಾಮದಲ್ಲಿ ಇಷ್ಟಲಿಂಗ ಮಹಾಪೂಜಾ ನಡೆಸುವರು. ದಿನಾಂಕ 26ರಂದು ಕುಷ್ಟಗಿ ತಾಲೂಕ ಚಳಗೇರಿ ಹಿರೇಮಠದಲ್ಲಿ ಲಿಂ.ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳವರ 10ನೇ ವರ್ಷದ ಪುಣ್ಯಾರಾಧನೆ, 30ರಂದು ಭದ್ರಾವತಿ ತಾಲೂಕ ಬಿಳಕಿ ಹಿರೇಮಠದ ಲಿಂಗೈಕ್ಯ ಶ್ರೀಗಳವರ ಪುಣ್ಯಾರಾಧನಾ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು.
ಶ್ರೀ ರಂಭಾಪುರಿ ಜಗದ್ಗುರುಗಳವರ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಸಮಸ್ತ ಜನತೆ ಪಡೆದುಕೊಳ್ಳಬೇಕೆಂದು ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ವಿನಂತಿಸಿದ್ದಾರೆ.