ಬೆಂಗಳೂರು: ಬನಶಂಕರಿಯ ಸುಚಿತ್ರ ಫಿಲಂ ಇನ್ಸ್ಟಿಟ್ಯೂಟ್ ನ ನಾಣಿ ಸಭಾಂಗಣದಲ್ಲಿ ಹಸ್ತಾವೃಕ್ಷ ಮತ್ತು PS Creative Solutions ನ ಮಹತ್ವಕಾಂಕ್ಷಿ ಯೋಜನೆಯಾದ ಹಸ್ತ ಫುಡ್ಸ್ ಸೋಮವಾರ ಲೋಕಾರ್ಪಣೆಗೊಂಡಿದೆ.
ಕಳೆದ ಕೆಲವು ತಿಂಗಳ ಹಿಂದೆ ಮಲೆನಾಡಿನ ವೈಶಿಷ್ಟ್ಯತೆಯೊಂದಿಗೆ ಪ್ರಾರಂಭವಾದ ಹಸ್ತವೃಕ್ಷ ಹಲವಾರು ವಿಭಾಗದಲ್ಲಿ ತನ್ನ ಛಾಪನ್ನು ಮುಡಿಸಲು ಸನ್ನದ್ಧಗೊಂಡಿದ್ದು , ಈಗ ಅಧಿಕೃತವಾಗಿ ಕರ್ನಾಟಕ ಅಲ್ಲದೆ ದೇಶದ ವಿವಿಧ ಭಾಗಗಳಲ್ಲಿ ಲಭ್ಯವಿರುತ್ತದೆ. ಆಹಾರ ತಯಾರಿಕೆ ಯಿಂದ ಹಿಡಿದು ಪ್ಯಾಕಿಂಗ್ ವರೆಗೂ ಕೂಡ ಕ್ವಾಲೀಟಿ ಬಗ್ಗೆ ಹೆಚ್ಚು ಒತ್ತನ್ನು ನೀಡಿದ್ದು ಮಲೆನಾಡಿನ ಪದಾರ್ಥಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಇದು ಸಂಪೂರ್ಣವಾಗಿ ಮಲೆನಾಡಿನ ಪದಾರ್ಥ ಗಳನ್ನೇ ಬಳಸಿ ಮಲೆನಾಡಿನಲ್ಲಿ ತಯಾರಾಗುವುದು ಹಸ್ತ ಜಿooಜs ವಿಶೇಷ ಎಂದು ಹಸ್ತ ವೃಕ್ಷ ಸಂಸ್ಥೆಯ ಸಿಇಒ ಮಾನಸ ಚಿದಂಬರ್ ಕೆ ಅವರು ಸಭೆಗೆ ತಿಳಿಸಿದರು.
ಇದೇ ಸಮಯದಲ್ಲಿ ಹಸ್ತ ವೃಕ್ಷ ಮತ್ತು PS PS Creative Solutionsನ director ಆದ ಪವನ್ ನಾಡಿಗ್ ಅವರು ಮಾತನಾಡಿ ಹಸ್ತ ವೃಕ್ಷ ಮತ್ತು PS Creative Solutionsನ ಸಹಭಾಗಿತ್ವದಲ್ಲಿ ಹೊರಹೊಮ್ಮಿರುವ ಹಸ್ತ foodsನ ಮಹತ್ವ ಮತ್ತು ಸಂಸ್ಥೆಯ ಮುಂದಿನ ಕಾರ್ಯ ರೂಪದ ಬಗ್ಗೆ ತಿಳಿಸಿದರು
ಇದೇ ಸಮಯದಲ್ಲಿ PS Creative Solutions ಒಂದು ವಿಭಿನ್ನವಾದ ಅಡ್ವರ್ಟೆÊಸಿಂಗ್ ಸಂಸ್ಥೆ ಆಗಿದ್ದು ಇದು ದೇಶದ ಮೊದಲ ಡಿಜಿಟಲ್ ಹೈಪರ್ ಲೋಕಲ್ ಸಂಸ್ಥೆಯಾಗಿದ್ದು ಇದು ಅಡ್ವರ್ಟೈಸಿಂಗ್ ಕ್ಷೇತ್ರದಲ್ಲಿ ಹೊಸ ಪರ್ವವನ್ನು ಸೃಷ್ಟಿಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತ ಪಡಿಸುವುದರ ಜೊತೆಯಲ್ಲಿ ಸಂಸ್ಥೆಯ ರೆವೆನ್ಯೂ ಮಾಡೆಲ್ ಮತ್ತು ಮುಂದಿನ ಕಾರ್ಯತಂತ್ರ ದ ಬಗ್ಗೆ ತಿಳಿಸಿದರು
ಈ ಸುಂದರ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಶ್ರೀಮತಿ ರೂಪ ಗುರುರಾಜ್ ಮತ್ತು ಶ್ರೀ ರೋಹನ್ ಕುಮಾರ್ ಕುಲಕರ್ಣಿ ಅವರು ಭಾಗವಹಿಸಿದ್ದರು