ಹರಿಹರ: ನಗರದ ನಗರಸಭೆ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಖಾತೆ ಮಾಡಿಕೊಡಲು ವಿಳಂಬ ಧೋರಣೆ ಅನುಸರಿಸುತ್ತಿದ್ದ ನಗರಸಭೆ ಪೌರಾಯುಕ್ತ ಹಾಗೂ ಸಿಬ್ಬಂದಿಗಳಿಗೆ ನಗರ ಸಭೆ ಸದಸ್ಯ ಜಾವೀದ್ ತರಾಟೆಗೆ ತೆಗೆದುಕೊಂಡ ಘಟನೆ ಹರಿಹರ ನಗರಸಭೆ ಅಧ್ಯಕ್ಷರ ಕಚೇರಿಯಲ್ಲಿ ಗುರುವಾರ ನಡೆದಿದೆ.
ನಗರಸಭೆ ಸದಸ್ಯ ಜಾವೀದ್ ಪತ್ರಕರ್ತರ ಜತೆ ಮಾತನಾಡಿ ಖಾತೆ ಬದಲಾವಣೆ, ಖಾತೆ ಮಾಡಿಕೊಡುವುದಕ್ಕೆ ಸಂಬಂಧಿಸಿದಂತೆ ಹಲವು ಅರ್ಜಿಗಳು ಬಾಕಿ ಇರುವುದನ್ನು ಹಲವು ಬಾರಿ ಗಮನಿಸಿದ್ದೇನೆ‘ಸಾರ್ವಜನಿಕರು ಅರ್ಜಿ ಸಲ್ಲಿಸಿದ ವಾರದೊಳಗೆ ಪರಿಶೀಲಿಸಿ ಖಾತೆ ಮಾಡಿಕೊಡಬೇಕು. ದಾಖಲೆಗಳು ಸರಿಯಾಗಿಲ್ಲದಿದ್ದರೆ ಹಿಂಬರಹ ನೀಡಿ ಅರ್ಜಿ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹಾಗೂ ಅನಗತ್ಯ ವಿಳಂಬ ಮಾಡಿದರೆ ಸಹಿಸಲಾಗದು ಎಂದು ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.
ನನ್ನ ತಾಯಿಯವರಾದ ಶಾಹಿದಾ ಬೀ ಆನ್ಲೈನ್ ಖಾತೆಗೆ ಅರ್ಜಿ ಸಲ್ಲಿಸಿದರು ಇದುವರೆಗೂ ಖಾತೆ ಬದಲಾವಣೆ ಆಗಿಲ್ಲ ಆದರೂ ಸಹ ಅಲೆದಾಡಿಸಿ ಇವತ್ತು ಕೊಡುತ್ತೇವೆ ನಾಳೆ ಕೊಡ್ತೀವಿ ಅಂತ ಹೇಳಿ ಇವಾಗ ಆನ್ಲೈನ್ ಖಾತಾ ಎಕ್ಸ್ಟ್ರೀಟ್ ಆಗಿಲ್ಲ ಅಂತ ಹೇಳಿ ಸುಖ ಸುಮ್ಮನೆ ಅಲೆದಾಡಿಸುತ್ತಿದ್ದಾರೆ. ಹಣ ನೀಡಲಿ ಅಂತ ವಿಳಂಬ ಧೋರಣೆ ಮಾಡುತ್ತಿದ್ದಾರೆ. ಖಾತಾ ಬದಲಾವಣೆಗೆ ಶುಲ್ಕವನ್ನು ಈಗಾಗಲೇ 3,000 ಸಾವಿರ ರೂಪಾಯಿಗಳನ್ನು ಸಹ ನಾನು ಹಣ ಪಾವತಿ ಮಾಡಿದ್ದೇನೆ ಎಂದರು.
ಈ ವಿಷಯವಾಗಿ ನಗರಸಭೆ ಪೌರಾಯುಕ್ತರ ಬಳಿ ಬಂದು ಚರ್ಚೆ ನಡೆಸಿದರೆ ನಾನು ಇಲ್ಲಿಂದ ಬೇರೆ ಕಡೆ ವರ್ಗಾವಣೆ ಮಾಡಿಕೊಂಡು ಹೋಗುತ್ತೇನೆ ಅಂತ ನಮಗೆ ಹೇಳುತ್ತಾರೆ ಎಂದು ಪೌರಾಯುಕ್ತರ ಮೇಲೆ ಬೇಸರ ವ್ಯಕ್ತಪಡಿಸಿದರು.
ನಾನು ಅದಕ್ಕೆ ನನಗೆ ಏನು ಹೇಳ್ತೀರಾ ನೀವು ನಿಮ್ಮ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರು ಆದೇಶ ನೀಡಿದರೆ ಹೋಗಿ ಎಂದು ಹೇಳಿದೆ.
ನಮಗೆ ನಗರಸಭೆ ಕಚೇರಿಯ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರು ಹಾಗೂ ಬಿಲ್ ಕಲೆಕ್ಟರ್ ಇವರ ಮೇಲೆ ಶಿಸ್ತು ಕ್ರಮ ಜರಗಿಸಲು ಪೌರಾಯುಕ್ತರಿಗೆ ಒತ್ತಾಯ ಮಾಡಿದ್ದೇವೆ. ಹರಿಹರದಲ್ಲಿ ಸಾರ್ವಜನಿಕರಿಗೆ ಖಾತೆ ಬದಲಾವಣೆ ಮಾಡುವ ವಿಷಯದಲ್ಲಿ ತಪ್ಪು ಮಾಡಿದರೆ ನಾವು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದು ಒಕ್ಕೂರಿಲಿನಿಂದ ಅಲ್ಲೇ ಇದ್ದ ಸುಮಾರು ಐದಾರು ಜನ ನಗರಸಭೆ ಸದಸ್ಯರುಗಳು ಪೌರಾಯುಕ್ತರಿಗೆ ಹೇಳಿದರು.
ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯಶೆಟ್ಟಿ ಅವರು ಮಾತನಾಡಿ ನಾನು ಈಗಾಗಲೇ ಕಂದಾಯ ವಿಭಾಗದ ಕರ ವಸೂಲಿಗಾರರಿಗೆ ಎರಡು ಬಾರಿ ನೋಟಿಸ್ ನೀಡಿದ್ದೇನೆ ಸಾರ್ವಜನಿಕರು ನಗರಸಭೆಗೆ ಖಾತಾ ಬದಲಾವಣೆ, ಖಾತೆ ಸಂಬಂಧಿಸಿದ ಅರ್ಜಿಗಳು ಬಂದರೆ ನಿಯಮಾನುಸಾರ ಕಡತಗಳನ್ನು ವಿಲೇವಾರಿ ಮಾಡಿ ಎಂದು ಈಗಾಗಲೇ ಕಂದಾಯ ಅಧಿಕಾರಿ, ಕಂದಾಯ ನಿರೀಕ್ಷಕರಿಗೆ ಕರ ವಸೂಲಿಗಾರರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಇದು ವೇಳೆ ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್, ಸದಸ್ಯರುಗಳಾದ ಬಾಬುಲಾಲ್,ಆಟೋ ಹನುಮಂತಪ್ಪ ಹಾಗೂ ನಗರಸಭೆ ಸಿಬ್ಬಂದಿಗಳು ಇನ್ನು ಮುಂತಾದವರು ಇದ್ದರು.