ಹರಿಹರ,ಸೆ.25 :ಸೀರತ್ ಅಭಿಯಾನ-2024ರ ಅಂಗವಾಗಿ ಸೆ.27 ರಂದು ಸಂಜೆ 7ಕ್ಕೆ ನಗರದ ಲಕ್ಷ್ಮಿ ಮಹಲ್‌ನಲ್ಲಿ ಪ್ರವಾದಿ ಮುಹಮ್ಮದ್ ಮಹಾನ್ ಚಾರಿತ್ರ್ಯವಂತ ವಿಷಯ ಕುರಿತು ವಿಚಾರಗೋಷ್ಟಿ ಆಯೋಜಿಸಿದೆ ಇಬ್ರಾ ಅಕಾಡೆಮಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅಬ್ದುಲ್ ರಹಮಾನ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಹರಿಹರದ ಜಮಾಅತೆ ಇಸ್ಲಾಮಿ ಹಿಂದ್, ಜೈ ಕರುನಾಡು ರಕ್ಷಣಾ ಸಂಘ, ಎಚ್.ಶಿವರಾಮೇಗೌಡರ ಬಣದ ಕರ್ನಾಟಕ ರಕ್ಷಣಾ ವೇದಿಕೆ, ರಾಬಿತಾ ಎ ಮಿಲ್ಲತ್ ಕಮಿಟಿ ಮತ್ತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಅಂಬೇಡ್ಕರ್ ವಾದ) ಸಂಯೋಜನೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಸಮಾರಂಭದಲ್ಲಿ ಕುಮಾರಪಟ್ಟಣಂನ ಪುಣ್ಯಕೋಟಿ ಗುರುಪೀಠದ ಬಾಲಯೋಗಿ ಜಗದೀಶ್ವರ ಶ್ರೀ, ಹರಿಹರ ಆರೋಗ್ಯ ಮಾತೆ ಬಸಿಲಿಕ ಚರ್ಚ್‌ನ ಪ್ರಧಾನ ಧರ್ಮಗುರು ಫಾ.ಕೆ.ಎ.ಜಾರ್ಜ್ ಆಶೀರ್ವಚನ ನೀಡಲಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಉಡುಪಿಯ ಅಕ್ಟರ್ ಅಲಿ ಅಧ್ಯಕ್ಷತೆವಹಿಸುವರು. ಶಾಸಕ
ಬಿ.ಪಿ.ಹರೀಶ್, ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ಎ.ಬಿ.ರಾಮಚಂದ್ರಪ್ಪ, ತಪೋವನ ಸಂಸ್ಥೆ ಸಂಸ್ಥಾಪಕ ಶಶಿಕುಮಾರ್ ಮೆಹರ್ವಾಡೆ, ಹರಿಹರ ಇನ್ಸ್‌ಪೆಕ್ಟರ್ ಎಸ್.ದೇವಾನಂದ್, ಕದಸಂಸ ಮುಖಂಡ ಎಚ್.ಮಲ್ಲೇಶ್, ಕಾರ್ಮಿಕ ಮುಖಂಡ ಎಚ್. ಕೆ.ಕೊಟ್ರಪ್ಪ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದರು.
ಇದೇ ವೇಳೆ ಮಕ್ಕಳ ತಜ್ಞ ವೈದ್ಯ ಡಾ.ಗುಲಾಂ ನಬಿ ಮಾತನಾಡಿ, ಸರ್ವ ಸಮುದಾಯದವರ ನಡುವೆ ಸಾಮರಸ್ಯತೆ ಮೂಡಿಸಲು ಈ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲಾ ಸಮುದಾದವರು ಕುಟುಂಬ ಸಮೇತ ಭಾಗವಹಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡ ಎಚ್.ಮಲ್ಲೇಶ್, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ, ಹರಿಹರ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಖಯೂಮ್ ಎಕ್ಕೆಗೊಂದಿ, ಸಮಾಜ ಸೇವಕ ಮೊಹಮ್ಮದ್ ಇರ್ಫಾನ್, ಜೈ ಕರುನಾಡು ರಕ್ಷಣಾ ಸಂಘದ ರಾಜ್ಯಾಧ್ಯಕ್ಷ ಶ್ರೀನಿವಾಸ್ ಕೊಡ್ಲಿ, ಕರ್ನಾಟಕ ರಕ್ಷಣಾ ವೇದಿಕೆಯ (ಎಚ್.ಶಿವರಾಮೇಗೌಡ ಬಣ) ಅಧ್ಯಕ್ಷ ಎಂ.ಇಲಿಯಾಸ್ ಇದ್ದರು.