-4.7 C
New York
Tuesday, December 24, 2024

Buy now

spot_img

ಹರಿಹರ: ಸೆ.21ರಂದು ಮಲೇಬೆನ್ನೂರು ಹಿಂದೂ ಮಹಾ ಗಣಪತಿ ವಿಸರ್ಜನೆ ಹಿನ್ನಲೆ ಶಿವಮೊಗ್ಗ-ಹರಿಹರ ರಾಜ್ಯ ಹೆದ್ದಾರಿ ವಾಹನ ಸಂಚಾರ ಮಾರ್ಗ ಬದಲಾವಣೆ

ಹರಿಹರ: ತಾಲ್ಲೂಕಿನ ಮಲೇಬೆನ್ನೂರು ಪಟ್ಟಣದ ಶ್ರೀ ಹಿಂದೂ ಮಹಾ ಗಣಪತಿ ವಿಸರ್ಜನೆ ಪ್ರಯುಕ್ತ ಶಿವಮೊಗ್ಗ-ಹರಿಹರ ರಾಜ್ಯ ಹೆದ್ದಾರಿಯ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.

ಸೆ.21ರಂದು ಮಲೇಬೆನ್ನೂರಿನಹಿಂದೂ ಮಹಾಗಣಪತಿ ವಿಸರ್ಜನೆಯು ಬೆಳಿಗ್ಗೆ 10-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಲೇಬೆನ್ನೂರು ಪಟ್ಟಣದ ಶಿವಮೊಗ್ಗ-ಹರಿಹರ ರಸ್ತೆಯಲ್ಲಿ ನಡೆಯಲಿದೆ. ಈ ಸಂಬಂಧ ವಾಹನ ಸಂಚಾರ ಮಾರ್ಗಗಳಲ್ಲಿ ಬೆಳಿಗ್ಗೆ 10-00ರಿಂದ ರಾತ್ರಿ 10 ವರೆಗೆ ಬದಲಾವಣೆ ಮಾಡಲಾಗಿರುತ್ತದೆ.

ಮಾರ್ಗ ಬದಲಾವಣೆ: ಹರಿಹರದಿಂದ ಹೊನ್ನಾಳಿಗೆ ಹೋಗುವ ವಾಹನಗಳು ಕುಂಬಳೂರು ಗ್ರಾಮದ ಮೂಲಕ ನಿಟ್ಟೂರು – ಹರಳಹಳ್ಳಿ ಹಾಲಿವಾಣ ಕೊಮಾರನಹಳ್ಳಿ ಕೆರೆ ಏರಿಯ ಮೂಲಕ ಹೊನ್ನಾಳಿ ಕಡೆಗೆ ಹೋಗುವುದು.

ಹೊನ್ನಾಳಿಯಿಂದ ಹರಿಹರಕ್ಕೆ ಹೋಗುವ ವಾಹನಗಳು ಕೊಮಾರನಹಳ್ಳಿ ಚಾನಲ್ ಮೂಲಕ, ಗುಡ್ಡದ ಬೇವಿನಹಳ್ಳಿ ಗ್ರಾಮ- ಜಿಗಳಿ – ಕುಂಬಳೂರು ಮಾರ್ಗವಾಗಿ ಹರಿಹರಕ್ಕೆ ಹೋಗಲು ಮಾರ್ಗ ಬದಲಾವಣೆ ಮಾಡಲಾಗಿದೆ ಎಂದು ಮಲೆಬೆನ್ನೂರು ಠಾಣೆಯ ಪಿಎಸ್ಐ ಪ್ರಭು ಡಿ ಕೆಳಗಿನಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles