ಮಲೇಬೆನ್ನೂರು: ತಾಲ್ಲೂಕಿನ ಗೋವಿನಹಾಳ್ ಗ್ರಾಮದ ಬಳಿಯ ಬೈರನಪಾದದ ಹತ್ತಿರದ ತುಂಗಭದ್ರಾ ನದಿ ದಂಡೆಯಲ್ಲಿ ಯಾರೋ ಅಪರಿಚತರು ಮರಳನ್ನು ಅಕ್ರಮವಾಗಿ ಸಾಗಣಿಕೆ ಮಾಡಿ ಲಾಭ ಮಾಡಿಕೊಳ್ಳುವ ದುರುದ್ದೇಶದಿಂದ ಮರಳನ್ನು ಸಂಗ್ರಹಿಸಿಟ್ಟಿದ್ದನ್ನು ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ ಸಗರಿ ರವರ ಮಾರ್ಗದರ್ಶನದಲ್ಲಿ ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ ಶ್ರೀ ಪ್ರಭು ಡಿ ಕೆಳಗಿನಮನಿ ರವರೊಳಗೊಂಡ ತಂಡವು ಶನಿವಾರ ಸಂಜೆ 5 ಗಂಟೆ ಸಮಯದಲ್ಲಿ ಮಲೇಬೆನ್ನೂರು ಪೊಲೀಸರು ದಾಳಿ ಮಾಡಿ, ಸುಮಾರು ಅಂದಾಜು ಬೆಲೆ 50,000/- ರೂ ಬೆಲೆಯ ಸುಮಾರು 20 ಮೆಟ್ರಿಕ್ ಟನ್ ಮರಳನ್ನು ವಶ ಪಡಿಸಿಕೊಂಡಿರುತ್ತಾರೆ.
ಈ ಬಗ್ಗೆ ಮಲೇಬೆನ್ನೂರು ಪೊಲೀಸ್ ಠಾಣೆಯ ಗುನ್ನೆ ನಂ: 10/2025 ಕಲಂ: 303 (2) ಬಿ.ಎನ್.ಎಸ್ ರೀತ್ಯಾ ಪ್ರಕರಣ ದಾಖಲಿಸಿರುತ್ತದೆ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಮರಳು ಮತ್ತು ಅಕ್ರಮ ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ ಐ.ಪಿ.ಎಸ್. ದಾವಣಗೆರೆ ಜಿಲ್ಲೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ್ ಎಂ ಸಂತೋಷ, ಕೆ.ಎಸ್.ಪಿ.ಎಸ್. ದಾವಣಗೆರೆ ಜಿಲ್ಲೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಜಿ. ಮಂಜುನಾಥ ಕೆ.ಎಸ್.ಪಿ.ಎಸ್. ದಾವಣಗೆರೆ ಜಿಲ್ಲೆ ಹಾಗೂ ಮಾನ್ಯ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಬಸವರಾಜ್ ಬಿ.ಎಸ್ ಕೆ.ಎಸ್.ಪಿ.ಎಸ್. ರವರ ಮಾರ್ಗದರ್ಶನದಲ್ಲಿ ಹಾಗೂ ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ ಸಗರಿ ಮತ್ತು ಪಿ.ಎಸ್.ಐ ಶ್ರೀ ಪ್ರಭು ಡಿ ಕೆಳಗಿನಮನಿ ಮಲೇಬೆನ್ನೂರು ರವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿರುತ್ತದೆ.
ಈ ಅಕ್ರಮ ಮರಳು ಸಂಗ್ರಹಣೆ ಪ್ರಕರಣವನ್ನು ಹರಿಹರ ವೃತ್ತ ನಿರೀಕ್ಷಕರಾದ ಶ್ರೀ ಸುರೇಶ ಸಗರಿ ಮತ್ತು ಮಲೇಬೆನ್ನೂರು ಪೊಲೀಸ್ ಠಾಣೆಯ ಪಿ.ಎಸ್.ಐ (ಕಾ.ಸು) ಶ್ರೀ ಪ್ರಭು ಡಿ ಕೆಳಗಿನ ಮನಿ, ಪಿ.ಎಸ್.ಐ (ತನಿಖೆ) ಶ್ರೀ ಚಿದಾನಂದಪ್ಪ, ಎ.ಎಸ್.ಐ ಶ್ರೀ ನಾಗೇಂದ್ರಪ್ಪ, ಸಿಬ್ಬಂದಿಯವರಾದ ಮಲ್ಲಿಕಾರ್ಜುನ, ಮಂಜನಾಯ್ಕ, ನಾಗರಾಜ್, ಲಿಂಗರಾಜು, ರಾಜಪ್ಪ, ಮುರುಳಿದರ ರವರ ತಂಡವು ಭೇದಿಸುವಲ್ಲಿ ಯಶಸ್ವಿಯಾಗಿದ್ದು ಈ ಪತ್ತೆ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ ಐ.ಪಿ.ಎಸ್. ದಾವಣಗೆರೆ ಜಿಲ್ಲೆ ರವರು ಮೆಚ್ಚುಗೆ ವ್ಯಕ್ತ ಪಡಿಸಿ ಶ್ಲಾಘಿಸಿರುತ್ತಾರೆ