ಹರಿಹರ: ಅಮರಾವತಿ ಕಾಲೋನಿಯ ವಾಸಿ ಶ್ರೀ ಜ್ಯೋಹಿತ್ ಡಿಸೋಜ್ ರವರ ಮನೆಯ ಕಿಟಕಿಯ ಸರಳನ್ನು ಕಟ್ ಮಾಡಿ ಮನೆಯೊಳಗೆ ಪ್ರವೇಶ ಮಾಡಿ, ಬೆಡ್ ರೂಮ್‌ನ ಸ್ಟೋರೆಜ್‌ನಲ್ಲಿದ್ದ 10 ಗ್ರಾಂ ತೂಕದ 65,000/- ರೂ ಬೆಲೆ ಬಾಳುವ ಬಂಗಾರದ ಕಿವಿಯೋಲೆಗಳು ಮತ್ತು 43 ಇಂಚಿನ 35,000 ರೂ ಬೆಲೆ ಬಾಳುವ ಟಿ.ವಿಯನ್ನು ದಿನಾಂಕ :12.09.2024 ರಂದು ಬೆಳಿಗ್ಗೆ 07.00 ಗಂಟೆಯಿAದ ದಿನಾಂಕ:13.09.2024 ರಂದು ಬೆಳಿಗ್ಗೆ 08.30 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿತ್ತಾರೆ ಎಂದು ನೀಡಿದ ದೂರಿನ ಮೇರೆಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ : 147/2024, ಕಲಂ : 305,331(3),331(4) ಬಿ.ಎನ್.ಎಸ್-2023 ರೀತ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತದೆ.
ಸದರಿ ಪ್ರಕರಣದಲ್ಲಿ ಆರೋಪಿತರ ಪತ್ತೆ ಕಾರ್ಯದಲ್ಲಿ ಮಾನ್ಯ ಶ್ರೀಮತಿ ಉಮಾ ಪ್ರಶಾಂತ್ ಪೊಲೀಸ್ ಅಧೀಕ್ಷಕರು ದಾವಣಗೆರೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯ್ ಕುಮಾರ್ ಸಂತೋಷ, ಶ್ರೀ ಮಂಜುನಾಥ ಜಿ, ಶ್ರೀ ಬಸವರಾಜ.ಬಿ.ಎಸ್, ಪೊಲೀಸ್ ಉಪಾಧೀಕ್ಷಕರು ಗ್ರಾಮಾಂತರ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಶ್ರೀ ಸುರೇಶ ಸಗರಿ ವೃತ್ತ ನಿರೀಕ್ಷಕರು ಹರಿಹರ ವೃತ್ತರವರ ನೇತೃತ್ವದಲ್ಲಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಶ್ರೀ ಮಂಜುನಾಥ ಎಸ್. ಕುಪ್ಪೇಲೂರು ಪಿ.ಎಸ್.ಐ(ಕಾ&ಸು), ಶ್ರೀ ಮಹಾದೇವ ಸಿದ್ದಪ್ಪ ಭತ್ತೆ ಹಾಗೂ ಸಿಬ್ಬಂದಿಗಳನ್ನೊಳಗೊAಡ ತಂಡವು ಪತ್ತೆ ಕಾರ್ಯ ನಡೆಸಿ ಆರೋಪಿತರುಗಳಾದ ಎ1 ಸೂಫಿಯಾನ್ ಷರೀಪ್ @ ಮುಭಾರಕ್ ತಂದೆ ಮಸ್ತಾನ್ ಸಾಬ್, ಕುಶಾಲ್ ನಗರ, ಕೆ.ಜಿ.ಹಳ್ಳಿ ಬೆಂಗಳೂರು. ಎ2 ಜಾವೀದ್ ತಂದೆ ನೂರುಲ್ಲಾ . ರಾಜಗೋಪಾಲ್ ನಗರ, ಬೆಂಗಳೂರು ವಾಸಿಗಳು ಇವರನ್ನು ಬಂಧಿಸಿ ಸದರಿ ಪ್ರಕರಣಕ್ಕೆ ಸಂಬAದಿಸಿದAತೆ ಹಾಗೂ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ಗುನ್ನೆ ನಂ:106/2024, 107/2024 ಹಾಗೂ ದಾವಣಗೆರೆ ವಿದ್ಯಾನಗರ ಠಾಣೆ ಗುನ್ನೆ ನಂ :220/2024, ಗಾಂಧಿನಗರ ಠಾಣೆ ಗುನ್ನೆ ನಂ :95/2024 ಕಲಂ : 331(3),331(4),305 ಬಿಎನ್‌ಎನ್-2023 ಪ್ರಕರಣಗಳಲ್ಲಿ ಕಳ್ಳತನವಾಗಿದ್ದ ಒಟ್ಟು 160 ಗ್ರಾಂ ತೂಕದ ಅಂದಾಜು ಬೆಲೆ ರೂ 12,80,000/ ಬೆಲೆಬಾಳುವ ಬಂಗಾರದ ಆಭರಣಗಳು, 1 ಕೆ.ಜಿ 600 ಗ್ರಾಂ ತೂಕ ಅಂದಾಜು ಬೆಲೆ ರೂ 1,35,000/- ಬೆಲೆ ಬಾಳುವ ಬೆಳ್ಳಿಯ ಸಾಮಾನುಗಳು ಮತ್ತು 43 ಇಂಚಿನ ಅಂದಾಜು ಬೆಲೆ ರೂ 35,000/- ಮಾಲ್ಯದ ಟಿ.ವಿ ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 1.50.000/-ರೂ ಬೆಲೆಯ 02 ಬೈಕ್‌ಗಳು ಸೇರಿದಂತೆ ಒಟ್ಟು ಅಂದಾಜು ಮೊತ್ತ 16.00.000/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದು . ಆರೋಪಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ. ತನಿಖೆ ಮುಂದುವರೆದಿದೆ.
ಸದರಿ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ ಮೇಲ್ಕಂಡ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳಾದ ತಿಪ್ಪೇಸ್ವಾಮಿ, ರಮೇಶ ಜಿ.ಎನ್. ನೀಲಮೂರ್ತಿ, ದಾದಾಪೀರ್, ಬಸವನಗೌಡ, ಲಿಂಗರಾಜ, ಸತೀಶ್, ಪ್ರಸನ್ನಕಾಂತ, ಅನಿಲ್ ಕುಮಾರ್ ನಾಯ್ಕ, ರಿಜ್ವಾನ್ ನಾಸೂರ್, ಅರ್ಜುನ್ ರಾಯಲ್, ಗಂಗಾಧರ, ಸುರೇಶ ಉಪ್ಪಾರ, ನಾಗರಾಜ ಎನ್.ಎಸ್, ವೆಂಕಟೇಶ, ರಾಮಾಂಜನೇಯ, ಋಷಿರಾಜ, ಸಿದ್ದಪ,್ಪ ಮುರುಳಿ ಹಾಗು ಜಿಲ್ಲಾ ಪೊಲೀಸ್ ಕಛೇರಿಯ ಶ್ರೀ ಮಂಜುನಾಥ ಎಸ್. ಕಲ್ಲೆದೇವರ, ರಾಘವೇಂದ್ರ, ಶಾಂತರಾಜರವರನ್ನೊಳಗೊAಡ ತಂಡವನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್, ಐಪಿಎಸ್ ರವರು ಶ್ಲಾಘಿಸಿರುತ್ತಾರೆ