ಹರಿಹರ: ಪ್ರಗತಿಪರ ಬರಹಗಾರರ ಒಕ್ಕೂಟಕ್ಕೆ 30 ವರ್ಷಗಳು ಸಂದಿವೆ. ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷೆಯಾದ ಶ್ರೀಮತಿ ಲಲಿತಮ್ಮ ಡಾ.ಚಂದ್ರಶೇಖರ್ ಅವರು ನಿರಂತರವಾಗಿ ಸಾಹಿತಿಗಳಿಗೆ ಪ್ರೋತ್ಸಾಹಿಸಿ ಮಾದರಿಯಾಗಿದ್ದಾರೆ. ಅವರು 93 ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ಅವರ ಜನ್ಮ ದಿನಾಚರಣೆಯ ಅಂಗವಾಗಿ ಅ.20ರ ಭಾನುವಾರ ಬೆಳಿಗ್ಗೆ 10-30ಕ್ಕೆ ಹರಿಹರದ ಕೋಟೆ ವಿಭಾಗದಲ್ಲಿರುವ ಶ್ರೀ ಹರಿಹರೇಶ್ವರ ಸಭಾಭವನದಲ್ಲಿ ದೊಡ್ಡಮ್ಮ ನವರಿಗೆ ಶುಭ ಕೋರಲಾಗುವುದು.
ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಶಾರದೇಶಾನಂದಜಿ ಮಹಾರಾಜ್ ದಿವ್ಯ ಸಾನಿಧ್ಯ ವಹಿಸುವರು.
ಪ್ರಗತಿಪರ ಬರಹಗಾರರ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಲಲಿತಮ್ಮ ಡಾ.ಚಂದ್ರಶೇಖರ್, ಪ್ರಶಸ್ತಿ ಪುರಸ್ಕöÈತರಾದ ಶ್ರೀ ಬಾ.ಮ.ಬಸವರಾಜಯ್ಯ ಉಪಸ್ಥಿತರಿರುವರು. ಸಾಹಿತ್ಯ ಕ್ಷೇತ್ರದಲ್ಲಿ ಪ್ರಗತಿಪರ ಬರಹಗಾರರ ಒಕ್ಕೂಟ 30ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿದೆ. ಅನೇಕ ಕವನ ಸಂಕಲನಗಳನ್ನು ಹೊರತಂದಿದೆ. ಈಗ ನೂತನ ಕಾರ್ಯಕಾರೀ ಸಮಿತಿ ರಚಿಸಿ ದೊಡ್ಡಮ್ಮನವರ ಸಲಹೆಯಂತೆ ಕಾರ್ಯ ಪ್ರವೃತ್ತರಾಗಿದ್ದೇವೆ. ಹೊಸ ಸದಸ್ಯರನ್ನು ಸೇರಿಸಿಕೊಂಡು ಒಕ್ಕೂಟ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎಂದು ಒಕ್ಕೂಟದ ಗೌರವಾಧ್ಯಕ್ಷರಾದ ಹೆಚ್.ಕೆ.ಕೊಟ್ರಪ್ಪ ತಿಳಿಸಿದರು.
ಪ್ರಗತಿಪರ ಬರಹಗಾರರ ಒಕ್ಕೂಟದ ಅಧ್ಯಕ್ಷ ಶ್ರೀ ಸುಬ್ರಹ್ಮಣ್ಯ ನಾಡಿಗೇರ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸುವರು.
ಮುಖ್ಯ ಅತಿಥಿಯಾಗಿ ಕ.ಸಾ.ಪ.ಜಿಲ್ಲಾಧ್ಯಕ್ಷರಾದ ಶ್ರೀ ವಾಮದೇವಪ್ಪ ಪಾಲ್ಗೊಳ್ಳುವರು. ನಿವೃತ್ತ ಕನ್ನಡ ಪ್ರಾಧ್ಯಾಪಕರಾದ ಹಾಗೂ ಹಿರಿಯ ಸಾಹಿತಿಗಳಾದ ಪ್ರೊ.ಸಿ.ವಿ.ಪಾಟೀಲ್ ಅವರು ಶ್ರೀಮತಿ ಲಲಿತಮ್ಮ ಡಾ.ಚಂದ್ರಶೇಖರ್ ಕುರಿತು ಅಭಿನಂದನಾ ನುಡಿಗಳನ್ನಾಡುವರು.
ಡಾ.ಡಿ.ಫ್ರಾನ್ಸಿಸ್ ಅವರ ಕುಟುಂಬ ಪ್ರಾಯೋಜಿಸಿರುವ ಶ್ರೀ ಲಲಿತಮ್ಮ ಡಾ.ಚಂದ್ರಶೇಖರ್ ಜೀವಮಾನ ಸಾಧನೆ 2024 ಪ್ರಶಸ್ತಿಗೆ ಈ ಬಾರಿ ರಂಗಭೂಮಿ, ಪತ್ರಿಕಾ ರಂಗ, ಸಾಹಿತ್ಯ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶ್ರೀ ಬಾ.ಮ.ಬಸವರಾಜಯ್ಯ ಭಾಜನರಾಗಿದ್ದಾರೆ. ಪ್ರತಿ ವರ್ಷ ಈ ಪ್ರಶಸ್ತಿಯನ್ನು ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ನೀಡಲಾಗುವುದು. ಈ ಪ್ರಶಸ್ತಿಯು ನಗದು 5000ರೂ ಮತ್ತು ವಿಶೇಷ ಸನ್ಮಾನ ಒಳಗೊಂಡಿದೆ ಎಂದು ಪ್ರಗತಿಪರ ಬರಹಗಾರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ.ಫ್ರಾನ್ಸಿಸ್ ತಿಳಿಸಿದರು.
ದೊಡ್ಡಮ್ಮನವರ ಆಶಯದಂತೆ ಜಿಲ್ಲಾ ಮಟ್ಟದ ಸುವರ್ಣ ಕವಿಕಾವ್ಯ ಸಿರಿ-24 ಕವಿಗೋಷ್ಠಿ ಆಯೋಜಿಸಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಚಿಂತನ ಪ್ರತಿಷ್ಠಾನದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿದೆ.
ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಆಯ್ಕೆಯಾದ 31ಕವಿಗಳು ಕವನ ವಾಚಿಸಲಿದ್ದಾರೆ.
ಕವಿಗೋಷ್ಠಿಯ ಉದ್ಘಾಟನೆಯನ್ನು ನಗರವಾಣಿ ಉಪ ಸಂಪಾದಕರಾದ ಶ್ರೀ ಬಿ.ಎನ್.ಮಲ್ಲೇಶ್ ಇವರು ನೆರವೇರಿಸಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸಾಹಿತಿ ಶ್ರೀಮತಿ ಸೀತಾ.ಎಸ್.ನಾರಾಯಣ ವಹಿಸಲಿದ್ದಾರೆ. ವೇದಿಕೆಯಲ್ಲಿ ಸಮಾಜ ಸೇವಕರಾದ ನಂದೀಗಾವಿಯ ಶ್ರೀ ಗೋವಿಂದ ರೆಡ್ಡಿ, ಪ್ರಗತಿಪರ ಬರಹಗಾರರ ಒಕ್ಕೂಟದ ಗೌರವಾಧ್ಯಕ್ಷರಾದ ಶ್ರೀ ಹೆಚ್.ಕೆ.ಕೊಟ್ರಪ್ಪ, ಪ್ರಶಸ್ತಿ ಪ್ರಾಯೋಜಕರಾದ ಶ್ರೀಮತಿ ವಸಂತಿ.ಡಿ.ಫ್ರಾನ್ಸಿಸ್ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಶ್ರೀಮತಿ ಶಾಮಲಾದೇವಿಯವರ ಕೃತಿ ಭೂಮಿ ತೂಕದ ತಾಯಿ ಕೃತಿ ಲೋಕಾರ್ಪಣೆ ಗೊಳ್ಳಲಿದೆ. ಕೃತಿ ಕುರಿತು ಡಾ.ಡಿ.ಫ್ರಾನ್ಸಿಸ್ ಮಾತನಾಡುವರು ಎಂದು ಪ್ರಗತಿಪರ ಬರಹಗಾರರ ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್ ಸುದ್ದಿಗಾರರಿಗೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿ ಶ್ರೀಮತಿ ಸೀತಾ.ಎಸ್.ನಾರಾಯಣ, ಶ್ರೀಮತಿ ಚಂದನ.ವೈ.ನೀಲಪ್ಪ, ಶ್ರೀಮತಿ ಬಿ.ನಾಗರತ್ನ, ಶ್ರೀಮತಿ ರಾಧಾ ಹನುಮಂತಪ್ಪ, ಶ್ರೀಮತಿ ಎ.ಬಿ.ಮಂಜಮ್ಮ, ಶ್ರೀಮತಿ ಶಾಮಲಾದೇವಿ, ಶ್ರೀಮತಿ ಗಾಯತ್ರಿ.ಜಿ.ಎಸ್, ಮಂಜುನಾಥ ಅಗಡಿ ಇದ್ದರು.