-4.7 C
New York
Monday, December 23, 2024

Buy now

spot_img

ದಾವಣಗೆರೆ: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಉಪ ತಹಶೀಲ್ದಾರ್‌ ಸುಧಾ ಮೂಡಲಗಿರಿಯಪ್ಪ

 

ಸಂತೆಬೆನ್ನೂರು: ಬೋನಾಪೈಡ್ ಪ್ರಮಾಣ ಪತ್ರ ನೀಡಲು ಅರ್ಜಿದಾರರಿಂದ 1,500 ರೂ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರ ಕೈಯಲ್ಲಿ ರೆಡ್ ಅಂಡ್ ಆಗಿ ಸಿಕ್ಕಿಬಿದ್ದ ಉಪ ತಹಶೀಲ್ದಾರ್‌ ಸುಧಾ ಮೂಡಲಗಿರಿಯಪ್ಪ ಇವರನ್ನು ಬಂಧಿಸಿರುವ ಘಟನೆ ಮಂಗಳವಾರ ನಡೆದಿದೆ.

ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪಿರ್ಯಾದುದಾರರಾದ ಶ್ರೀ.ಎಸ್.ಆರ್.ಕುಮಾರ್ ಬಿನ್ ಲೇಟ್ ರುದ್ರಪ್ಪ, 47 ವರ್ಷ, ವ್ಯವಸಾಯ ವೃತ್ತಿ. ವಾಸ: ಹಿರೇಗಂಗೂರು ಗ್ರಾಮ, ಚನ್ನಗಿರಿ ತಾಲ್ಲೂಕ್, ದಾವಣಗೆರೆ ಜಿಲ್ಲೆ. ರವರು ನೀಡಿದ ದೂರಿನ ಸಾರಾಂಶವೇನೆಂದರೆ, ನಾನು ಮತ್ತು ನನ್ನ ತಮ್ಮ ಗಿರೀಶ ಇಬ್ಬರೂ ಕೂಡಿ ಉಪತಹಶೀಲ್ದಾರ್, ಸಂತೆಬೆನ್ನೂರು ಹೋಬಳ-2 (ನಾಡಕಛೇರಿ, ದೇವರಹಳ್ಳಿ) ಇವರಿಗೆ ದಿನಾಂಕ.26-09-2024ರಂದು ಬೋನಾಪೈಡ್ ಪ್ರಮಾಣ ಪತ್ರ ಸಲ್ಲಿಸಲು ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ನಮ್ಮ ಎಲ್ಲಾ ದಾಖಲೆಗಳು ಸರಿ ಇದ್ದರೂ ಕೂಡ ನೀವು ಗುರುತಿನ ಚೀಟಿಯನ್ನು ಒದಗಿಸಿಲ್ಲ ಎಂದು ದಿನಾಂಕ.05-10-2024 ರಂದು ಹಿಂಬರಹವನ್ನು ನೀಡಿ. ನನ್ನ ಅರ್ಜಿಯನ್ನು ರಿಜೆಕ್ಟ್ ಮಾಡಿದ್ದರು. ನಂತರ ಪುನಃ ದಿನಾಂಕ.08-10-2024 ರಂದು 2ನೇ ಬಾರಿ ಬೋನಾಪೈಡ್ ಪ್ರಮಾಣ ಪತ್ರಕ್ಕೆ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಹಾಕಿದ್ದೆವು. ದಿನಾಂಕ.10-10-2024 ರಂದು ಸಂಜೆ ಸುಮಾರು 04-00 ಗಂಟೆ ಸಮಯದಲ್ಲಿ ಉಪ ತಹಶೀಲ್ದಾರ್ ರವರಾದ ಶ್ರೀ ಸುಧಾ ಮೂಡಲಗಿರಿಯಪ್ಪ ರವರಿಗೆ ನನ್ನ ಕೆಲಸದ ಬಗ್ಗೆ ವಿಚಾರಿಸಿದಾಗ, ಎರಡು ಸಾವಿರ ರೂಪಾಯಿ ಕೊಟ್ರೆ ಕೆಲಸ ಮಾಡ್ತಿನಿ ಎಂದು ಹೇಳಿದ್ದು, ಮುಂಗಡವಾಗಿ 500/-ರೂ.ಗಳನ್ನು ಕೊಟ್ಟು, ಉಳಿದ ಹಣವನ್ನು ಕೆಲಸದ ನಂತರ ಕೊಡುವುದಾಗಿ ತಿಳಿಸಿದೆವು.

ಉಪ ತಹಶೀಲ್ದಾರ್‌ ರವರಾದ ಶ್ರೀಮತಿ ಸುಧಾ ಮೂಡಲಗಿರಿಯಪ್ಪ ರವರು ಬೋನಾಪೈಡ್ ಪ್ರಮಾಣ ಪತ್ರ ನೀಡಲು 2000/-ರೂ.ಗಳಿಗೆ ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಪಿರ್ಯಾದಿಯವರಿಗೆ ಲಂಚದ ಹಣ ಕೊಡಲು
ಇಷ್ಟವಿಲ್ಲದ ಕಾರಣ ಉಪತಹಶೀಲ್ದಾರ್‌ರವರಾದ ಶ್ರೀಮತಿ ಸುಧಾ ಮೂಡಲಗಿರಿಯಪ್ಪ ಇವರ ವಿರುದ್ದ ಕಾನೂನು ಕ್ರಮ ಜರುಗಿಸಲು ನೀಡಿದ ದೂರಿನ ಮೇರೆಗೆ ದಿನಾಂಕ:15-10-2024 ರಂದು ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣಿ ಮೊಕದ್ದಮೆ ಸಂ: 10/2024 ಕಲಂ: 7(೩) ಪಿಸಿ ಆಕ್ಟ್-1988 (ತಿದ್ದುಪಡಿ ಕಾಯ್ದೆ-2018) ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತದೆ.

ದಿನಾಂಕ 15-10-2024 ರಂದು ಆರೋಪಿತರು ಪಿರ್ಯಾದಿಯವರಿಂದ 1500/- ರೂ ಲಂಚದ ಹಣವನ್ನು ಸ್ವೀಕರಿಸಿದ್ದು ಟ್ರ್ಯಾಪ್ ಕಾರ್ಯಾಚರಣೆ ಯಶಸ್ವಿಯಾಗಿರುತ್ತದೆ.

ಮಾನ್ಯ ಶ್ರೀ ಎಂ.ಎಸ್.ಕೌಲಾಪೂರೆ ಪೊಲೀಸ್ ಅಧೀಕ್ಷಕರು ಕ.ಲೋ. ದಾವಣಗೆರೆ ಮತ್ತು ಶ್ರೀಮತಿ ಕಲಾವತಿ, ಪೊಲೀಸ್ ಉಪಾಧೀಕ್ಷಕರು ಕರ್ನಾಟಕ ಲೋಕಾಯುಕ್ತ ದಾವಣಗೆರೆ ರವರ ಮಾರ್ಗದರ್ಶನದಲ್ಲಿ, ಪೊಲೀಸ್ ನಿರೀಕ್ಷಕರಾದ ಶ್ರೀ ಮಧುಸೂದನ್ ಸಿ. ಶ್ರೀ ಪ್ರಭು ಬ ಸೂರಿನ ಮತ್ತು ಶ್ರೀಮತಿ ಸರಳ.ಪಿ ಹಾಗೂ ಸಿಹೆಚ್‌ಸಿ ಸಿಬ್ಬಂದಿಗಳಾದ ಶ್ರೀ ಆಂಜನೇಯ, ವೀರೇಶಯ್ಯ, ಸುಂದರೇಶ್, ಮಹೆಚ್‌ಸಿ ಶ್ರೀಮತಿ ಆಶಾ. ಸಿಪಿಸಿ ರವರುಗಳಾದ ಮಲ್ಲಿಕಾರ್ಜುನ ಎನ್.ಬಿ. ಅಂಗೇಶ ಎಸ್.ಎನ್, ಧನರಾಜ್ ಎನ್. ಗಿರೀಶ ಎಸ್.ಹೆಚ್. ಹಾಗೂ ಚಾಲಕರಾದ.ಬಸವರಾಜ್, ಕೃಷ್ಣ, ವಿನಾಯಕ ರವರುಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಆರೋಪಿತರಾದ ಶ್ರೀಮತಿ ಸುಧಾ ಮೂಡಲಗಿರಿಯಪ್ಪ ರವರನ್ನು ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿರುತ್ತಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles