-8 C
New York
Monday, December 23, 2024

Buy now

spot_img

ಜಿಲ್ಲಾ ಉಸ್ತುವಾರಿ ಸಚಿವರು, ಎಸ್ಪಿ ಅಭಿನಂದನೆ; ರಾಜ್ಯಮಟ್ಟದ ಬೆಂಚ್ ಪ್ರೆಸ್ ಸ್ಪರ್ಧೆ: ಡಿ. ಸುಜಿಲ್ ಅಹಮದ್ ಚಿನ್ನ

ದಾವಣಗೆರೆ : ದಿನಾಂಕ: 13.9.2024ರಿಂದ 15.9.2024ರವರೆಗೆ ಕುಂದಾಪುರದ ಸಾಲಿಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಬೆಂಚ್‍ಪ್ರೆಸ್ ಸ್ಪರ್ಧೆಯು ನಗರದ ಕಾರ್ಪೋರೇಷನ್ ವ್ಯಾಯಾಮ ಶಾಲೆಯ ಕ್ರೀಡಾಪಟು ಡಿ. ಸುಜಿಲ್ ಅಹಮದ್ ಅವರು ಸಬ್ ಜ್ಯೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿ 120 ಕೆಜಿ ತೂಕವನ್ನು ಎತ್ತುವುದರ ಮೂಲಕ ಚಿನ್ನದ ಪದಕ ಪಡೆದಿರುತ್ತಾರೆ.

ಸುಜಿಲ್ ಅಹಮದ್ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಮತ್ತು ಡಿಎಆರ್ ಡಿವೈಎಸ್ಪಿ ಪಿ.ಬಿ. ಪ್ರಕಾಶ್ ಹಾಗೂ ವ್ಯಾಯಾಮ ಶಾಲೆಯ ತರಬೇತಿದಾರ ಎನ್.ಹನುಮಂತ, ನಗರದ ಎಲ್ಲಾ ಹಿರಿಯ ಮತ್ತು ಕಿರಿಯ ಕ್ರೀಡಾಪಟುಗಳು ಅಭಿನಂದಿಸಿದ್ದಾರೆ.

ಸುಜಿಲ್ ಅಹಮದ್ ಅಂತರಾಷ್ಟ್ರೀಯ ಪವರ್ ಲಿಫ್ಟರ್ ಹೆಚ್.ದಾದಾಪೀರ್ ಹಾಗೂ ಅಂತರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ಮಹಿಳಾ ಪೊಲೀಸ್ ಅಧಿಕಾರಿಯಾದ ಶ್ರೀಮತಿ ಕೆ.ಎನ್. ಶೈಲಜಾ ಅವರ ಪುತ್ರ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles