ಹರಿಹರ: ಕುಡಿಯುವ ನೀರು ಹಾಗೂ ಫ್ಲೋರೈಡ್ ಅಂಶ ಹೆಚ್ಚಾಗಿಲ್ಲದ ಪೌಷ್ಟಿಕ ಆಹಾರ ಸೇವನೆ ಬಳಕೆಯಿಂದ ದಂತ ಹಾಗೂ ಮೂಳೆ ಮತ್ತಿತರ ಕ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಸಾಧ್ಯ ಎಂದು ತಹಸಿಲ್ದಾರ್ ಗುರು ಬಸವರಾಜ ಹೇಳಿದರು.
ಹರಿಹರ ತಾಲೂಕ್ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಫ್ಲೋರೋಸಿಸ್ ತಡೆ ಹಾಗೂ ನಿಯಂತ್ರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ. ದಂತ ಮೂಳೆ ಹಾಗೂ ಇತರೆ ದೇಹದ ಭಾಗಗಳಿಗೆ ಆಗುವ ಕ್ಲೋರೋಸಿಸ್ ರೋಗವನ್ನು ತಡೆಗಟ್ಟುವಲ್ಲಿ. ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಗಳಲ್ಲಿ ಶುದ್ಧ ನೀರು ಕುಡಿಯುವ ಘಟಕವನ್ನು ವ್ಯವಸ್ಥೆ ಮಾಡಲಿದೆ. ಸಾಮಾನ್ಯವಾಗಿ ಅಂತರ್ಜಲದಲ್ಲಿ ಸಿಗುವ ನೀರಿನಲ್ಲಿ ಫ್ಲೋರೈಡ್ ಒಂದು ಪಿಪಿಎಂಗಿಂತ ಹೆಚ್ಚಾಗಿ ಕಂಡು ಬರುವುದರಿಂದ ಎಲ್ಲಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಶುದ್ಧ ನೀರು ಘಟಕವನ್ನು ಸ್ಥಾಪಿಸಲಾಗಿದ್ದು. ಎಲ್ಲರೂ ಸಹ ಶುದ್ಧ ನೀರು ಘಟಕದಲ್ಲಿ ಸಿಗುವ ನೀರನ್ನೇ ಕುಡಿಯಲು ಉಪಯೋಗಿಸಿ ಎಂದು ಹೇಳಿದರು.
ಜಿಲ್ಲಾ ಮಲೇರಿಯ ನಿಯಂತ್ರಾಧಿಕಾರಿಗಳಾದ ಡಾಕ್ಟರ್ ಗಂಗಾಧರ ಅವರು ಮಾತನಾಡಿ ಹಾಲಿಲ್ಲದ ಕಪ್ಪು ಟಿ. ಕಪ್ಪು ಉಪ್ಪು. ಡಬ್ಬಿಗಳಲ್ಲಿ ಸಂಗ್ರಹಿಸಿದ ತಿಂಡಿ ತಿನಿಸುಗಳು. ಕೆಲವು ಔಷಧಿಗಳಲ್ಲಿ. ಹಾಗೂ ಸೌಂದರ್ಯ ವರ್ಧಕ ಔಷಧಿಗಳಲ್ಲಿಯೂ ಸಹ ಫ್ಲೋರೈಡ್ ಇದೆ.ಇವುಗಳ ಉಪಯೋಗಗಳಿಂದ ಫ್ಲೋರೋಸಿಸ್ ಕಾಯಿಲೆ ಬರುತ್ತದೆ. ಆದುದರಿಂದ ಒಂದು ಪಿಪಿಎಂ ಫ್ಲೋರೈಡ್ ಹೆಚ್ಚಾಚಗಿರುವ ಇರುವ ಆಹಾರ ಪದಾರ್ಥಗಳು ಹಾಗೂ ಸೌಂದರ್ಯ ವರ್ಧಕ ವಸ್ತುಗಳ ಬಳಕೆಯನ್ನು ಕಡಿಮೆ ಮಾಡಿ ಎಂದು ಹೇಳಿದರು.
ಜಿಲ್ಲಾ ಫ್ಲೋರೋಸಿಸ್ ಸಲಹೆಗಾರರಾದ ಸಿದ್ದಯ್ಯರವರು ಪಿಪಿಟಿ ಮೂಲಕ ತರಬೇತಿಯನ್ನು ನೀಡಿದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ ಅಬ್ದುಲ್ ಖಾದರ್. ಹಾಗೂ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಹಾಸ್ಟೆಲ್ ವಾರ್ಡನ್ ಗಳು ಉಪಸ್ಥಿತರಿದ್ದರು
ಕಾರ್ಯಕ್ರಮದ ಸ್ವಾಗತವನ್ನು ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮ್ಮಣ್ಣ ಮಾಡಿದರು ಹಾಗೂ ನಿರೂಪಣೆಯನ್ನು ತಾಲ್ಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ನಾಗರಾಜು ನಡೆಸಿಕೊಟ್ಟರು..