ದಾವಣಗೆರೆ,ಸೆ.19: ಜಿಲ್ಲೆ ನ್ಯಾಮತಿ ತಾಲೂಕಿನ ಮರಿಗೊಂಡನಹಳ್ಳಿಯಲ್ಲಿ ಸೆಪ್ಟೆಂಬರ್ 18 ರಂದು ಪ.ಜಾತಿಯವರಾದ ಶಿವರಾಜ್ ಇವರಿಗೆ ಇದೇ ಗ್ರಾಮದವರು ವೈಯಕ್ತಿಕ ದ್ವೇಷದಿಂದ ಕೊಲೆ ಮಾಡಿದ್ದು ಜಿಲ್ಲಾಡಳಿತವು ಕೊಲೆಯಾದ ಶಿವರಾಜ್ ಇವರ ಪತ್ನಿ ಸಂತ್ರಸ್ಥೆಯಾದ ಚೈತ್ರಾಗೆ ಒಂದೇ ದಿನದಲ್ಲಿ ರೂ.4,12,500 ರೂ.ಗಳ ಪರಿಹಾರದ ಚೆಕ್‍ನ್ನು ನೀಡುವ ಮೂಲಕ ಮಾನವೀಯತೆ ಮರೆಯಲಾಗಿದೆ.
ಪರಿಶಿಷ್ಟ ಜನಾಂಗದವರ ಮೇಲೆ ದೌರ್ಜನ್ಯವಾಗಿ ಸಂತ್ರಸ್ಥರಾದವರಿಗೆ ತಕ್ಷಣ ಪರಿಹಾರ ನೀಡುವ ಯೋಜನೆ ಇದಾಗಿದ್ದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿಯವರ ಆದೇಶದಂತೆ ಎಫ್‍ಐಆರ್ ಮತ್ತು ಮರಣೋತ್ತರ ಪರೀಕ್ಷೆ ಆಧಾರದ ಮೇಲೆ ಸಂತ್ರಸ್ಥರ ಬ್ಯಾಂಕ್ ಖಾತೆಗೆ ಖಜನೆ ಮೂಲಕ ಮಂಜೂರಾತಿ ಮಾಡಿ ಆದೇಶಿಸಲಾಗಿರುತ್ತದೆ.
ಇದೇ ಘಟನೆಯಲ್ಲಿ ಮತ್ತೊಬ್ಬ ಸಂತ್ರಸ್ಥ ಭರತ ತಂದೆ ರಮೇಶ್ ಇವರು ಸಹ ಗಾಯಾಳುಗಳಾಗಿದ್ದು ಶಿವಮೊಗ್ಗ ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಿಗೂ ಎಫ್‍ಐಆರ್ ಹಂತದಲ್ಲಿ ರೂ 50,000 ಗಳನ್ನು ಸಂತಸ್ಥರ ಬ್ಯಾಂಕ್ ಖಾತೆಗೆ ಆರ್‍ಟಿಜಿಎಸ್ ಮೂಲಕ ಜಮೆ ಮಾಡಲಾಗಿರುತ್ತದೆ.
ದಾವಣಗೆರೆ ಜಿಲ್ಲಾಡಳಿತವು ತ್ವರಿತಗತಿಯಲ್ಲಿ ಸಂತ್ರಸ್ತರಿಗೆ ಪರಿಹಾರ ಮಂಜೂರಾತಿ ಮಾಡಿ ಆದೇಶಿಸಲಾಗಿದೆ. ಹಾಗೂ ನೊಂದವರ ಕುಟುಂಬಕ್ಕೆ ಆಹಾರ ಸಾಮಗ್ರಿಗಳನ್ನು ಸಹ ವಿತರಣೆ ಮಾಡಲಾಗಿದ್ದು ಸಂತಸ್ಥರಿಗೆ ಸಾಂತ್ವನ ತಿಳಿಸಿ ಕಾನೂನು ನೆರವು ನೀಡಲಾಗಿದೆ.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ನಾಗರಾಜ್, ಉಪವಿಭಾಗಾಧಿಕಾರಿ ಅಭಿμÉೀಕ್, ಹೊನ್ನಾಳಿ ತಹಶೀಲ್ದಾರ್ ಗೋವಿಂದಪ್ಪ ಭೇಟಿ ನೀಡಿ ಮಂಜೂರಾತಿ ಆದೇಶ ನೀಡಿದರು.