-8 C
New York
Monday, December 23, 2024

Buy now

spot_img

ಶಿಕಾರಿಪುರದಲ್ಲಿ‌ ಈಶ್ವರಪ್ಪ ಕಚೇರಿ ಎದುರು ನಿಂಬೆ ಹಣ್ಣು ಇಟ್ಟು ವಾಮಾಚಾರ

ಶಿವಮೊಗ್ಗ. ಮೇ.6: ಶಿಕಾರಿಪುರದ ರಾಷ್ಟ್ರಭಕ್ತ ಬಳಗದ ಕಚೇರಿ ಮುಂಭಾಗ ವಾಮಾಚಾರ ನಡೆಸಲಾಗಿದೆ. ರಾಷ್ಟ್ರಭಕ್ತ ಬಳಗದ ಕಚೇರಿ ಮುಂಭಾಗ ಎರಡು ಗೊಂಬೆ, ಹರಿಶಿಣ ಕುಂಕಮ, ನಿಂಬೆಹಣ್ಣು ಇಟ್ಟು ವಾಮಾಚಾರ ನಡೆಸಲಾಗಿದೆ. ಇಂದು ಬೆಳಗ್ಗೆ ರಾಷ್ಟ್ರ ಭಕ್ತರ ಬಳಗದ ಕಾರ್ಯಕರ್ತರು ಕಚೇರಿಗೆ ಹೋದಾಗ ವಾಮಾಚಾರ ಬಯಲಿಗೆ ಬಂದಿದೆ. ನಿನ್ನೆ ರಾತ್ರಿ ವಾಮಾಚಾರ ಮಾಡಿರುವ ಶಂಕೆ ವ್ಯಕ್ತವಾಗಿದೆ.ವಾಮಾಚಾರ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ರಾಷ್ಟ್ರಭಕ್ತ ಬಳಗದ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ, “ಶಿವಮೊಗ್ಗ ಲೋಕಸಭ ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತದೆ ಎಂಬ ಭಯದಿಂದ ರಾಷ್ಟ್ರಭಕ್ತ ಬಳಗ ಕಚೇರಿಯ ಮುಂದೆ ವಾಮಾಚಾರ ನಡೆಸಿದ್ದಾರೆ. ಕಚೇರಿ ಮುಂದೆ ಅರಿಶಿಣ, ಕುಂಕುಮ ಹಾಕಿ ವಾಮಾಚಾರ ನಡೆಸಿದ್ದಾರೆ. ಆದರೆ, ಮತದಾರರು, ದೇವರು ನನ್ನ ಜೊತೆ ಇದ್ದಾರೆ. ಇದಕ್ಕೆ ನಾನು ಹೆದರುವುದಿಲ್ಲ. ದೊಡ್ಡ ಅಂತರದಲ್ಲಿ ನಾನು ಗೆಲ್ಲುತ್ತೇವೆ. ಶಿಕಾರಿಪುರದಲ್ಲಿ ಭಯದ ವಾತಾವರಣವಿದೆ. ಆದರೂ ಮತದಾರರು ನನಗೆ ಮತ ಹಾಕುತ್ತಾರೆ. ಶಿಕಾರಿಪುರದಲ್ಲಿ ನಾನು ಅತಿ ಹೆಚ್ಚಿನ ಅಂತರದಲ್ಲಿ ನಾನು ಗೆಲ್ಲುತ್ತೇನೆ” ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles