ಹರಿಹರ: ಕವಲೆತ್ತು ಗ್ರಾಮದಲ್ಲಿರುವ ಕುಡಿಯುವ ನೀರಿನ ಜಾಕ್ ವೆಲ್ ಪಾಯಿಂಟ್‌ಗೆ ಗುರುವಾರ ಪೌರಾಯುಕ್ತರಾದ ಬಸವರಾಜ್ ಐ ಅವರು ಭೇಟಿ ನೀಡಿ. ಗುತ್ತಿಗೆದಾರರು ಮತ್ತು ಕಾರ್ಮಿಕರಿಂದ ಹಾಲಿ ಇರುವ ಮರಳಿನ ಚೀಲದ ಬ್ಯಾರೇಜ್ ಅನ್ನು ಹೆಚ್ಚುವರಿಯಾಗಿ ಎರಡರಿಂದ ಮೂರು ಅಡಿ ಎತ್ತರ ಮಾಡಿಸುವುದರ ಮೂಲಕ ಹರಿಹರದ ಸಾರ್ವಜನಿಕರಿಗೆ ಹೆಚ್ಚಿನ ಕುಡಿಯುವ ನೀರಿನ ಶೇಖರಣೆ ಮಾಡಿಸಿದರು.