ಹರಿಹರ: ನಗರದಲ್ಲಿ ಪಟಾಕಿ ಮಾರಾಟ ಮಾಡಲು ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ನಿರ್ಮಿಸಲು ಎಸ್‌ಜೆವಿಪಿ ಕಾಲೇಜ್ ಆವರಣದಲ್ಲಿ ನಿಗದಿಪಡಿಸಿದ್ದು ಸಂಬAಧ ಪಟ್ಟಅಧಿಕಾರಿಗಳು ಈ ಪರವಾನಿಗೆಯನ್ನು ರದ್ದುಪಡಿಸಬೇಕು ಎಂದು ಡಿಎಸ್‌ಎಸ್4 ತಾಲ್ಲೂಕು ಸಂಚಾಲಕ ಮಂಜಪ್ಪ ಜಿ.ಎಂ. ಆಗ್ರಹ ಪಡಿಸಿದರು.
ಇದೆ ವೇಳೆ ನಗರಸಭೆ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಿದರು.
ನಂತರ ಮಾತನಾಡಿದ ಅವರು ಎಸ್‌ಜೆವಿಪಿ ಕಾಲೇಜ್ ಈ ಅವರಣದ ಜಾಗದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಪೆಟ್ರೋಲ್ ಬಂಕ್ ವಾಸೋಪಯೋಗಿ ಮನೆಗಳು ಇರುವುದರಿಂದ ಜನದಟ್ಟಣಿ ಹೆಚ್ಚಾಗಿರುವುದರಿಂದ ಹೆಚ್ಚು ಸುರಕ್ಷಿತ ಸ್ಥಳವಲ್ಲ ಎಂದರು.
ಶೈಕ್ಷಣಿಕವಾಗಿ ಬಳಕೆಯಲ್ಲಿದ್ದು ವಾಣಿಜ್ಯ ಉಪಯೋಗಕ್ಕಾಗಿ ಬಳಸಿರುವುದು ಖಂಡಿಸಿ ಪಟಾಕಿ ಅಂಗಡಿಗಳಿಗೆ ಅನುಮತಿ ನೀಡದ ಊರಿನ ಹೊರ ವಲಯದಲ್ಲಿಡಲು ಅನುಮತಿ ನೀಡಲು ಹಾಗೂ ಕೆಲ ಪಟಾಕಿ ಅಂಗಡಿಗಳಿಗೆ ಪರವಾನಿಗೆ ಇಲ್ಲದಿರುವುದು ಕಂಡುಬಂದಿರುವುದರಿಂದ ನಗರಸಭೆ ಆಧಿಕಾರಿಗಳು ಹಾಗೂ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಪರಿಶೀಲಿಸಿ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.
ಇದೆ ವೇಳೆ ತಾಲ್ಲೂಕು ಸಂಘಟನಾ ಸಂಚಾಲಕರುಗಳಾದ ಭಾಸ್ಕರ ಬಿ.ಎಂ, ವಿಶ್ವನಾಥ್ ಕೆ.ಬೇವಿನಹಳ್ಳಿ, ಕೀರ್ತಿ ಎನ್, ಹರೀಶ್ ರಾಜನಹಳ್ಳಿ, ವಿನಾಯಕ ಹಾಗೂ ಇನ್ನೂ ಮುಂತಾದವರು ಇದ್ದರು.