-4.7 C
New York
Tuesday, December 24, 2024

Buy now

spot_img

ದಾವಣಗೆರೆ: 20 ಲಕ್ಷ ರೂ ಮೌಲ್ಯದ ವಿವಿಧ ಕಂಪನಿಯ ಒಟ್ಟು 130 ಮೊಬೈಲ್‌ಗಳನ್ನು ಮೋಬೈಲ್ ವಾರಸುದಾರರಿಗೆ ಹಿಂದಿರುಗಿಸಿದ: ಎಸ್‌ಪಿ ಉಮಾ ಪ್ರಶಾಂತ್

ದಾವಣಗೆರೆ: ಜಿಲ್ಲಾ ಪೊಲೀಸ್ ಕಛೇರಿಯಲ್ಲಿಂದು ಪೊಲೀಸ್ ಆಧೀಕ್ಷಕರವರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರ ಅಧ್ಯಕ್ಷತೆಯಲ್ಲಿ CEIR ಪೋರ್ಟಲ್ ಮೂಲಕ ಪತ್ತೆಯಾದ ಮೋಬೈಲ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು.

 


ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡವರು ಕೂಡಲೇ ನೂತನCEIR (Central Equipment Identity Register) ಪೋರ್ಟಲ್‌ಗೆ ಬೇಟಿ ನೀಡಿ ತಮ್ಮ ಮೊಬೈಲ್‌ನ ಸಂಪೂರ್ಣ ಮಾಹಿತಿ ನೀಡಿ ನೊಂದಾಯಿಸಿ ತಮ್ಮ ಮೊಬೈಲ್ ಅನ್ನು ಬ್ಲಾಕ್ ಮಾಡಿದ್ದು, ನಂತರ ಸದರಿ ಮೊಬೈಲ್‌ಗಳಲ್ಲಿ ಹಲವು ಮೊಬೈಲ್‌ಗಳನ್ನು ದಾವಣಗೆರೆ ಪೊಲೀಸರು CEIR ವೆಬ್ ಪೋರ್ಟಲ್ ಮೂಲಕ ಪತ್ತೆ ಮಾಡಿದ್ದು ಇರುತ್ತದೆ, ನೂತನ CEIR ವೆಬ್ ಪೋರ್ಟಲ್ ಮೂಲಕ ಪತ್ತೆಯಾದ ಸುಮಾರು 20,00,000/- ರೂಗಳ ಮೌಲ್ಯದ ವಿವಿಧ ಕಂಪನಿಯ ಒಟ್ಟು 130 ಮೊಬೈಲ್‌ಗಳನ್ನು ಪೊಲೀಸ್ ಅಧೀಕ್ಷಕರವರು ಮೋಬೈಲ್ ವಾರಸುದಾರರಿಗೆ ಹಿಂದಿರುಗಿಸಿದರು.


ದಾವಣಗೆರೆ ಜಿಲ್ಲೆಯಲ್ಲಿ ಮಾರ್ಚ್ ತಿಂಗಳಿAದ ಇಲ್ಲಿಯವರೆಗೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೊಬೈಲ್ ಕಳೆದುಕೊಂಡವರು ಕೂಡಲೇ ನೂತನ ಅಇIಖ ಪೋರ್ಟಲ್‌ಗೆ ಬೇಟಿ ನೀಡಿ ತಮ್ಮ ಮೊಬೈಲ್‌ನ ಸಂಪೂರ್ಣ ಮಾಹಿತಿ ನೀಡಿ ನೊಂದಾಯಿಸಿದ್ದ ಮೊಬೈಲ್‌ಗಳಲ್ಲಿ CEIR ಪೋರ್ಟಲ್ ಮೂಲಕ 3290 ಮೊಬೈಲ್ ಗಳನ್ನು ಬ್ಲಾಕ್ ಮಾಡಲಾಗಿದ್ದು, ಅವುಗಳಲ್ಲಿ ಈಗಾಗಲೇ 390 ಮೊಬೈಲ್ ಗಳನ್ನು ಮೊಬೈಲ್ ವಾರಸುದಾರರಿಗೆ ಹಿಂತಿರುಗಿಸಲಾಗಿದ್ದು, ಈ ದಿನ 130 ವಿವಿಧ ಕಂಪನಿಯ ಮೊಬೈಲ್ ಗಳನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರು ಮೋಬೈಲ್ ವಾರಸುದಾರರಿಗೆ ಹಿಂದಿರುಗಿಸಿದರು. ಈವರೆಗು ಒಟ್ಟು 520 ಮೊಬೈಲ್‌ಗಳನ್ನು ವಾರಸುದಾರರಿಗೆ ಹಿಂದಿರುಗಿಸಲಾಗಿರುತ್ತದೆ.


ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ್ ರವರು, ಸಿಇಎನ್ ಪೊಲೀಸ್ ನಿರೀಕ್ಷಕರಾದ ಶ್ರೀ ಪಿ ಪ್ರಸಾದ್ ರವರು ಉಪಸ್ಥಿತರಿದ್ದರು.

ಸಾರ್ವಜನಿಕರು ತಮ್ಮ ಮೊಬೈಲ್ ಕಳುವಾದಲ್ಲಿ/ ಸುಲಿಗೆಯಾಗಿದ್ದಲ್ಲಿ/ ಕಾಣೆಯಾಗಿದ್ದಲ್ಲಿ ಕೂಡಲೇ ನೂತನ ಅಇIಖ ವೆಬ್ ಪೋರ್ಟಲ್ ಗೆ ಬೇಟಿ ನೀಡಿ ನೋಂದಾಯಿಸಲು ಹಾಗೂ ಇದರ ಸದುಪಯೋಗ ಪಡೆಯಲು ಈ ಮೂಲಕ ತಿಳಿಸಲಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles