ಜಗಳೂರು: ಬಸನಗೌಡ ತಂದೆ ಚಂದ್ರಪ್ಪ , 47 ವರ್ಷ . ಸ್ವಂತ ವಿಳಾಸ : ಕೆಳಗೋಟೆ ಗ್ರಾಮ , ಜಗಳೂರು ತಾಲ್ಲೂಕು ದಾವಣಗೆರೆ ಜಿಲ್ಲೆ ಹಾಲ ವಾಸ : ಕರಿಯಾಂಬಿಕಾ ದೇವಸ್ಥಾನದ ಬಳ , ನಿಲುವ , ದಾವಣಗೆರೆ ರವರ ಕೆಳಗೋಟೆ ಗ್ರಾಮದಲ್ಲರುವ ಮನೆ ಖಾತೆ ನಂ -23 ನೇ ದ್ದಕ್ಕೆ ಈ – ಸ್ವತ್ತು ಮಾಡಿಕೊಡಲು ಅರ್ಜಿ ಸಲ್ಲಿಸಿದ್ದು , ಕೆಚ್ಚೇನಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಓ ರವರಾದ ಶ್ರೀ ನಂದಿಅಂಗೇಶ ಸಾರಂಗಮಠ ರವರು ಸದರಿ ಈ – ಸ್ವತ್ತು ಮಾಡಿಕೊಡಲು 10,000 / – ರೂ ಲಂಚದ ಹಣಕ್ಕೆ ಬೇಡಿಕೆ ಇಟ್ಟದ್ದು .
ಈ ಸಂಬಂಧ ದಿನಾಂಕ : 21-10-2023 ರಂದು ದಾವಣಗೆರೆ ಲೋಕಾಯುಕ್ತ ಪೊಲೀಸ್ ಠಾಣೆ ಗುನ್ನೆ ನಂ : 18/2023 ಕಲಂ 7 ( ೩ ) ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ -1988 ( ತಿದ್ದುಪಡಿ ಕಾಯ್ದೆ -2018 ) ರೀತ್ಯ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿರುತ್ತದೆ .
ಈ ದಿವಸ ದಿನಾಂಕ : 27-10-2023 ರಂದು ಮೇಲ್ದಂಡ ಪ್ರಕರಣದಲ್ಲಿ ಆರೋಪಿತರಾದ ಶ್ರೀ ನಂದಿಅಂಗೇಶ ಸಾರಂಗಮಠ ಎಸ್.ಎಂ ತಂದೆ ಭೀಮಲಿಂಗಯ್ಯ , 35 ವರ್ಷ , ಪಿಡಿಓ , ಕೆಚ್ಚೇನಹಳ್ಳಿ ಗ್ರಾಮ ಪಂಚಾಯ್ತಿ , ಜಗಳೂರು ತಾಲ್ಲೂಕು , ದಾವಣಗೆರೆ ಜಿಲ್ಲೆ ಮತ್ತು ಅಜ್ಜಯ್ಯ ಆರ್ ತಂದೆ ರುದ್ರೇಶ್ , 32 ವರ್ಷ , ಡಾಟಾ ಎಂಟ್ರಿ ಆಪರೇಟರ್ , ಕೆಚ್ಚೇನಹಳ್ಳಿ ಗ್ರಾಮ ಪಂಚಾಯ್ತಿ , ಜಗಳೂರು ತಾಲ್ಲೂಕು , ದಾವಣಗೆರೆ ಜಿಲ್ಲೆ ರವರುಗಳು ತಾಲ್ಲೂಕು ಪಂಚಾಯ್ತಿಯ ಕಛೇರಿಯಲ್ಲಿ ಫಿರ್ಯಾದಿ ಕಡೆಯಿಂದ 10,000 / – ರೂ ಗಳ ಲಂಚದ ಹಣವನ್ನು ಪಡೆಯುವಾಗ ಟ್ರ್ಯಾಪ್ ಆಗಿದ್ದು , ಮುಂದಿನ ಕ್ರಮಕ್ಕಾಗಿ ದಸ್ತಗಿರಿ ಮಾಡಿರುತ್ತದೆ.
ಶ್ರೀ ಎಂ.ಎಸ್ ಕೌಲಾಪೂರೆ , ಪೊಲೀಸ್ ಅಧೀಕ್ಷಕರು , ಕರ್ನಾಟಕ ಲೋಕಾಯುಕ್ತ , ದಾವಣಗೆರೆ ರವರ ಮಾರ್ಗದರ್ಶನದಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯವರು ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು , ಟ್ರ್ಯಾಪ್ ಯಶಸ್ವಿಯಾಗಿರುತ್ತದೆ.