ಚಿತ್ರದುರ್ಗ: ಶರಣಸಂಸ್ಕೃತಿ ಉತ್ಸವ 2023ರ ಅಂಗವಾಗಿ ಇಂದು ಶ್ರೀಮುರುಘಾಮಠದಲ್ಲಿ ಶ್ರೀ ಜಗದ್ಗುರು ಜಯದೇವ ಜಂಗೀಕುಸ್ತಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಸಮ್ಮುಖ ವಹಿಸಿದ್ದ ಹಾವೇರಿ ಶ್ರೀ ಹೊಸಮಠದ ಶ್ರೀ ನಿ.ಪ್ರ.ಸ್ವ ಬಸವ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ದೇಶೀಯ ಹಳೆಯ ಕ್ರೀಡೆಗಳನ್ನು ಪ್ರೋತ್ಸಾಹಿಸಿ ಬೆಳಸುತ್ತಿರುವುದು ಶ್ರೀಮಠ. ಶ್ರೀಮಠದ ವತಿಯಿಂದ ಪ್ರತಿ ಸಾಲಿನಲ್ಲೂ ಕುಸ್ತಿ ಪಂದ್ಯಾವಳಿಯನ್ನು ನಡೆಸುತ್ತಾ ಬರಲಾಗಿದೆ. ಯುವಜನತೆ ದುಶ್ಚಟಗಳಿಂದ ದೂರವಿದ್ದು ಕ್ರೀಡೆಗಳ ಕಡೆಗೆ ಆಸಕ್ತಿ ತೋರಿಸಬೇಕು ಎಂದು ನುಡಿದರು.
ಚಿತ್ರದುರ್ಗದ ಶ್ರೀ ಮೇದಾರ ಕೇತೇಶ್ವರ ಗುರುಪೀಠದ ಶ್ರೀ ಇಮ್ಮಡಿ ಬಸವ ಕೇತೇಶ್ವರ ಸ್ವಾಮಿಗಳು ಮಾತನಾಡಿ, ಕುಸ್ತಿ ಪಂದ್ಯಾವಳಿಯು ಮೈಸೂರು ಬಿಟ್ಟರೆ ಚಿತ್ರದುರ್ಗದಲ್ಲಿ ಪ್ರತಿ ವರ್ಷ ನಡೆಯುತ್ತದೆ. ಇಲ್ಲಿ ಭಾಗವಹಿಸಿದ ಕುಸ್ತಿಪಟುಗಳು ಅಂತರಾಷ್ಟಿçÃಯ ಮಟ್ಟದಲ್ಲೂ ತಮ್ಮ ಸಾಧನೆ ತೋರುವಂತಾಗಬೇಕು ಎಂದು ನುಡಿದರು. ಹೊಳವನಹಳ್ಳಿ ಶ್ರೀ ಪುಟ್ಟೇಶ್ವರಸ್ವಾಮಿ ಮಠದ ಶ್ರೀ ತಿಪ್ಪೇರುದ್ರಸ್ವಾಮಿಗಳು ಮಾತನಾಡಿ, ಭಾರತ ದೇಶ ವಿಶ್ವಕ್ಕೆ ಗುರುವಾಗಿದೆ. ಕಾರಣ 64 ವಿದ್ಯೆಗಳನ್ನು ಹೊಂದಿರುವ ದೇಶವಾಗಿದೆ. ಈ ದೇಶೀಯ ಕ್ರೀಡೆಯನ್ನು ಜಗತ್ತಿಗೆ ಭಾರತ ನೀಡಿದೆ. ಕುಸ್ತಿಪಟುಗಳನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹಿಸಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ಶರಣ ಸಂಸ್ಕೃತಿ ಉತ್ಸವ-2023ರ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಮಹಾಸ್ವಾಮಿಗಳು, ಉಸ್ತುವಾರಿ ಶ್ರೀಗಳಾದ ಶ್ರೀ ಬಸವಪ್ರಭುಸ್ವಾಮಿಗಳು, ಎಸ್.ಜೆ.ಎಂ.ವಿದ್ಯಾಪೀಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದÀ ಶ್ರೀ.ಎಂ.ಭರತ್‌ಕುಮಾರ್, ಶರಣಸಂಸ್ಕೃತಿ ಉತ್ಸವ-2023ರ ಕಾರ್ಯಾಧ್ಯಕ್ಷರಾದ ಶ್ರೀ ಕೆ.ಸಿ.ನಾಗರಾಜ್, ಮಠದ ಕುರುಬರಹಟ್ಟಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀ ಗಣೇಶ್.ಆರ್. ಹಾಗೂ ವಿವಿಧ ಮಠಾದೀಶರು, ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.
ಈ ಕುಸ್ತಿ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳಾದ, ತೆಲ್ಲಂಗಾಣ, ಆಂದ್ರಪ್ರದೇಶ್, ವiಹಾರಾಷ್ಟ, ಪಂಜಾಬ್ ಹಾಗೂ ಕರ್ನಾಟಕದ ಮೈಸೂರು, ಬೆಳಗಾವಿ, ಹುಬ್ಬಳ್ಳಿ, ದಾರವಾಡ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳು ಸೇರಿದಂತೆ 80-90 ಜೋಡಿಗಳು ಭಾಗವಹಿಸಿದ್ದವು.
ತೀರ್ಪುಗಾರರಾಗಿ ತಿಪ್ಪೇಸ್ವಾಮಿ, ಅಮೃತ್ ಪುರೋಹಿತ, ಮರಡಿ, ಭರತ್, ಮಹಮದ್ ಆಲಿ, ಆಸೀಫುಲ್ಲಾ, ಕೃಷ್ಣಮೂತಿ ಸಿ ದೊಡ್ಡಗರಡಿ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮುರುಗೇಶ್ ನಿರೂಪಿಸಿದರು. ಈ ಸಂದರ್ಭದಲ್ಲಿ ಪಾತ್ಯರಾಜನ್, ವಿಶ್ವನಾಥ್ ಕೆ ಎನ್, ಮಹೇಂದ್ರನಾಥ್, ಬಿ ಜಿ ನಾಗರಾಜ್, ವಿರೇಂದ್ರಕುಮಾರ್, ಡಾ.ಕುಮಾರಸ್ವಾಮಿ, ಪ್ರಶಾಂತ್, ನಾಗಾನಾಯ್ಕ್, ಮಂಜುನಾಥ್, ಹಾಜರಿದ್ದರು.