ದಾವಣಗೆರೆ: ಅ.22: ನಗರದ ಪ್ರತಿಷ್ಟಿತ ಶ್ರೀಸೋಮೇಶ್ವರ ವಿದ್ಯಾಲಯದಲ್ಲಿ ಪೋಷಕರಿಗಾಗಿ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಅಧಿಕ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿದ್ದರು.
ವಿದ್ಯಾರ್ಥಿಗಳ ತಾಯಂದಿರು ಭಾಗವಸುವ ಮೂಲಕ ಸಖತ್ ಎಂಜಾಯ್ ಮಾಡಿದರು. ಮ್ಯೂಸಿಕಲ್ ಚೇರ್, ಥ್ರೋ ಬಾಲ್, ಕೇರಂ ಸೇರಿದಂತೆ ಹಲವು ಕ್ರೀಡೆಗಳನ್ನ ಅಯೋಜಿಸಲಾಗಿತ್ತು. ಕ್ರೀಡಾಕೂಟ ಉದ್ದೇಶಿಸಿ ಮಾತನಾಡಿದ ಶಾಲಾ ಪ್ರಾಂಶುಪಾಲರಾದ ಪ್ರಭಾವತಿಯವರು, ಸದಾ ಮಕ್ಕಳ ಆರೈಕೆ, ಪೋಷಣೆಯಲ್ಲಿ ಪೋಷಕರು ಇರುತ್ತಾರೆ, ಈ ಕಾರಣಕ್ಕಾಗಿ ಪೋಷಕರಿಗೂ ಸಹ ಸ್ವಲ್ಪ ರಿಲ್ಯಾಕ್ಸ್ ಆಗಲು ಇಂಥ ಕಾರ್ಯಕ್ರಮ ಅಯೋಜನೆ ಮಾಡಬೇಕೆಂದು ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಕೆ. ಎಂ ಸುರೇಶ್ ರವರು ಸಲಹೆ ನೀಡಿದ್ದರು, ಅದರಂತೆ ಪೋಷಕರಿಗಾಗಿ ಇಂಥ ಕ್ರೀಡಾಕೂಟ ಏರ್ಪಡಿಸಲಾಗಿದೆ. ಪೋಷಕರು ಶಾಲೆಯೊಂದಿಗೆ ಉತ್ತಮ ಒಡನಾಟ ಹೊಂದಲು ಇಂಥ ಕಾರ್ಯಕ್ರಮ ಅನುಕೂಲವಾಗುತ್ತದೆ ಎಂದರು.
ಕ್ರೀಡಾಕೂಟ ಕಾರ್ಯಕ್ರಮಕ್ಕೆ ಮುಖ್ಯಅತಿಥಿಯಾಗಿ ಪೋಷಕರಾದ ಶ್ರೀಮತಿ ರಂಜಿನಿ ರಮೇಶ್ ಆಗಮಿಸಿದ್ದರು, ಕಾರ್ಯಕ್ರಮದ ನಿರೂಪಣೆಯನ್ನು ಮುಖ್ಯಶಿಕ್ಷಕಿ ಗಾಯತ್ರಿ ಮಾಡಿದರು. ದೈಹಿಕ ಶಿಕ್ಷಕರಾದ ನಾಗರಾಜ್, ರಾಹುಲ್ ಹಾಗೂ ಇಂದ್ರಮ್ಮ ಕ್ರೀಡಾಕೂಟದ ಮಾರ್ಗದರ್ಶನ ಮಾಡಿದ್ದರು.
ಈ ವೇಳೆ ಆಡಳಿತಾಧಿಕಾರಿ ಹರೀಶ್ ಬಾಬು, ಮುಕ್ಯೋಪಾಧ್ಯಾಯರಾದ ಮಾಲಾ, ಪ್ರಕಾಶ್, ಸೇರಿದಂತೆ ಶಿಕ್ಷಕರು, ಪೋಷಕರು ಉಪಸ್ಥಿತರಿದ್ದರು.