ಆರುಷಿ ಪಾದಯಾತ್ರೆಗೆ ಸ್ವಾಗತ
ದಾವಣಗೆರೆ: ಹೆಣ್ಣು ಭ್ರೂಣ ಹತ್ಯೆ ನಿಯಂತ್ರಣ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ‘ಆರುಷಿ’ ಯೋಜನೆ ಜಾರಿಗೆ ಆಗ್ರಹಿಸಿ ನಡೆಸುತ್ತಿರುವ ಪಾದಯಾತ್ರೆ ದಾವಣಗೆರೆ ನಗರಕ್ಕೆ ಆಗಮಿಸಿದಾಗ ಎಸ್ ಎ ಎಸ್ ಎಸ್ ಯೋಗ ಕೇಂದ್ರದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಯೋಗಚಾರ್ಯ ಡಾ.ಎನ್ .ಪರಶುರಾಮ್ ಶುಭಕೋರಿದರು.
ಆರುಷಿ ಯೋಜನೆ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ, ಕೇಂದ್ರ ಸರಕಾರಕ್ಕೆ ವರದಿ ನೀಡುವಂತೆ ಒತ್ತಾಯಿಸಿ ಕನ್ಯಾಕುಮಾರಿಯಿಂದ ನವದೆಹಲಿವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ. ಗುರುವಾರ ಬೆಳಗ್ಗೆ 10 ಗಂಟೆಗೆ ಹದಡಿ ರಸ್ತೆಯಿಂದ ಪ್ರಾರಂಭವಾದ ಯಾತ್ರೆ, ಸಂಗೊಳ್ಳಿ ರಾಯಣ್ಣ ವೃತ್ತದ ಮೂಲಕ ಹರಿಹರ ನಗರದತ್ತ ಸಾಗುವ ಸಂದರ್ಭದಲ್ಲಿ ಸ್ವಾಗತಕೋರಿ ಬೀಳ್ಕೊಟ್ಟರು.