ದಾವಣಗೆರೆ; ಅ.20: ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್ ಅವರು ಅಕ್ಟೋಬರ್.21 ರಿಂದ 24ರ ವರೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಅ.21 ರಂದು ದಾವಣಗೆರೆಯಲ್ಲಿ ಸಾರ್ವಜನಿಕರ ಕುಂದು ಕೊರತೆ ಹಾಗೂ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಧ್ಯಾಹ್ನ 2.30ಕ್ಕೆ ಹಾವೇರಿಗೆ ತೆರಳಿ. ರಾತ್ರಿ 8ಕ್ಕೆ ದಾವಣಗೆರೆ ಆಗಮಿಸಿ ವಾಸ್ತವ್ಯ ಮಾಡುವರು.
ಅ.22 ರಂದು ಸಾರ್ವಜನಿಕರ ಕುಂದು ಕೊರತೆÀ ವಿಚಾರಣೆ ಮತ್ತು ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಮಾಡುವರು. ಅ.23 ರಂದು ಸಾರ್ವಜನಿಕರ ಕುಂದು ಕೊರತೆ ವಿಚಾರಣೆ ಹಾಗೂ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ. ವಾಸ್ತವ್ಯ ಮಾಡುವರು.
ಅ.24 ರಂದು ಸಾರ್ವಜನಿಕರ ಕುಂದು ಕೊರತೆಗಳ ವಿಚಾರಣೆ ಹಾಗೂ ವಿಜಯ ದಶಮಿ ಕಾರ್ಯಕ್ರಮದಲ್ಲಿ ಭಾಗವಹಿಸಿ ವಾಸ್ತವ್ಯ ಮಾಡುವರು.