ಹರಿಹರ: ನಗರದ ಅಂಜುಮನ್-ಎ-ಇಸ್ಲಾಂ ಸಂಸ್ಥೆ ಆಡಳಿತ ಮಂಡಳಿಗೆ ಅ.೨೮ರಂದು ಚುನಾವಣೆ ನಡೆಯಲಿದ್ದು ಉತ್ತಮ ವ್ಯಕ್ತಿತ್ವದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಶಾಮೀರ್ ಆಲಮ್ ಖಾನ್ ಕೋರಿದ್ದಾರೆ.
ಸಂಸ್ಥೆಯ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಣ ಗುಣಮಟ್ಟ ಸುಧಾರಣೆ ಮಾಡುವುದು, ತಾಂತ್ರಿಕ ಹಾಗೂ ಉನ್ನತ ಶಿಕ್ಷಣದ ಕೋರ್ಸ್ಗಳ ಆರಂಭ, ಸಂಸ್ಥೆಯ ಮೇಲಿರುವ ಕಲ್ಯಾಣ ಮಂಟಪದ ಸಾಲವನ್ನು ತೀರುವಳಿ ಮಾಡುವುದು, ವರಮಾನ ಹೆಚ್ಚಿಸಿ ಸಂಸ್ಥೆಯನ್ನು ಆರ್ಥಿಕವಾಗಿ ಸಬಲಗೊಳಿಸುವುದು.
ಕೋಟ್ಯಾಂತರ ರೂ. ಬೆಲೆಬಾಳುವ ಸಂಸ್ಥೆಯ ಆಸ್ತಿ, ಪಾಸ್ತಿಗಳ ರಕ್ಷಣೆ, ಮಹಿಳೆಯರ ಅಭಿವೃದ್ಧಿ, ವಕ್ಫ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಲ್ಯಾಣ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಕಾರ್ಯ ಯೋಜನೆ ಮಾಡುವಂತಹ ವಿದ್ಯಾವಂತ, ಪ್ರಮಾಣಿಕ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಬೇಕೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.