-4.7 C
New York
Tuesday, December 24, 2024

Buy now

spot_img

ಮದ್ಯದ ಅಂಗಡಿ ಪರವಾನಗಿ ನೀಡಲು 3 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಅಬಕಾರಿ ಡಿ.ಸಿ. ಸೇರಿದಂತೆ ನಾಲ್ವರು ಲೋಕಾಯುಕ್ತ ಬಲೆಗೆ

ದಾವಣಗೆರೆ: ನಗರದ ದೇವರಾಜ ಅರಸು ಬಡಾವಣೆಯಲ್ಲಿ ಇರುವ ಅಬಕಾರಿ ಇಲಾಖೆ ಕಚೇರಿಯಲ್ಲಿ ಆರೋಪಿ ಅಶೋಕ ಎಚ್.ಎಂ. ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.

ದಾವಣಗೆರೆ ಜಿಲ್ಲಾ ಅಬಕಾರಿ ಡಿ.ಸಿ ಸ್ವಪ್ನ, ಪ್ರಥಮ ದರ್ಜೆ ಸಹಾಯಕ ಅಶೋಕ ಎಚ್.ಎಂ., ಹರಿಹರ ಅಬಕಾರಿ ವಲಯ ಕಚೇರಿಯ ಅಬಕಾರಿ ನಿರೀಕ್ಷಕಿ ಶೀಲಾ, ದ್ವಿತೀಯ ದರ್ಜೆ ಸಹಾಯಕಿ ಶೈಲಶ್ರೀ ಬಂಧಿತರು.

ಡಿ.ಜಿ. ರಘುನಾಥ ಎಂಬುವವರು ಹರಿಹರದ ಅಮರಾವತಿ ಬಳಿ ಮದ್ಯದ ಅಂಗಡಿ ಆರಂಭಿಸಲು ಅರ್ಜಿ ಹಾಕಿದ್ದರು. ಆರೋಪಿಗಳು 3 ಲಕ್ಷ ಲಂಚಕ್ಕೆ ಅರ್ಜಿದಾರನಿಗೆ ಬೇಡಿಕೆ ಇಟ್ಟಿದ್ದರು.

ದಾವಣಗೆರೆ ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪೂರೆ ಅವರ ಮಾರ್ಗದರ್ಶನದಲ್ಲಿ ಸಬ್‌ ಇನ್‌ಸ್ಪೆಕ್ಟರ್‌ಗಳಾದ ಪ್ರಭು ಬ. ಸೂರಿನ, ಮಧುಸೂಧನ್, ಎಚ್.ಎಸ್. ರಾಷ್ಟ್ರಪತಿ, ಹಾವೇರಿ ಪೊಲೀಸ್ ಇನ್‌ಸ್ಪೆಕ್ಟರ್ ಮಂಜುನಾಥ ಪಂಡಿತ್ ಅವರ ನೇತೃತ್ವದಲ್ಲಿ ಕಾನ್‌ಸ್ಟೆಬಲ್‌ಗಳಾದ
ಜಂಷಿದಾ ಖಾನಂ, ಧನರಾಜ್, ವೀರೇಶಯ್ಯ, ಆಂಜನೇಯ, ಗಿರೀಶ್, ವಿನಾಯಕ, ಕೃಷ್ಣನಾಯ್ಕ, ಮೋಹನ್, ಕೋಟಿನಾಯ್ಕ, ಮಾಲತೇಶ ಅರಸೀಕೆರೆ, ಮಲ್ಲಿಕಾರ್ಜುನ, ಲಿಂಗೇಶ, ಬಸವರಾಜ, ಲಕ್ಷ್ಮವ್ವ ಅನವೇರಿ, ಹರ್ಷಿಯಾ, ಎಸ್‌.ಎಸ್.ಕಡಕೋಳ, ಮಹಾಂತೇಶ ಕಂಬಳಿ, ಮಹಾಂತೇಶ ಕಂಬಳಿ, ಸರೋಜಾ ಕಾರ್ಯಾಚರಣೆಯಲ್ಲಿ ಇದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles