-3.1 C
New York
Tuesday, December 24, 2024

Buy now

spot_img

ಹರಿಹರ: ಮನೆ ಕಳ್ಳತನ ಮಾಡುತ್ತಿದ್ದ 4 ಜನ ಅಂತರ್ ಜಿಲ್ಲಾ ಕಳ್ಳರ ಬಂಧನ: ಸುಮಾರು 8.16 ಲಕ್ಷ ರೂ ಮೌಲ್ಯದ ಸ್ವತ್ತು ವಶ

ಹರಿಹರ: ನಗರದಲ್ಲಿ ಮನೆ ಕಳ್ಳತನ ಮಾಡಿದ್ದ 4 ಜನ ಅಂತರ್ ಜಿಲ್ಲಾ ಕಳ್ಳರನ್ನು‌‌ ಹರಿಹರ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಬರೋಬ್ಬರಿ 8.16 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ.

ನಗರದ ಕೇಶವ ನಗರ ಹಾಗೂ ಪಟೇಲ್ ಬಡಾವಣೆಯಲ್ಲಿ ಮನೆ ಕಳ್ಳತನವಾಗಿದ್ದರ ಬಗ್ಗೆ ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ಆರೋಪಿಗಳಾದ 01) ಸುರೇಶ್‌ ಶಿಂಗ್ರೂರ್, 27 ವರ್ಷ, ಬೆಳಗಾವಿ ಜಿಲ್ಲೆ. 02) ದುರುಗಪ್ಪ, ಕುಂಚಿಕೊರವರ, ಬೆಳಗಾವಿ ಜಿಲೆ, 03) ನಾಗಪ್ಪ @ನಾಗ, 41 ವರ್ಷ, ದಾರವಾಡ ಜಿಲೆ, 04) ಸಂತೋಷ್ ಪವಾರ, 28 ವರ್ಷ, ಕೊಲ್ಲಾಪುರ ಇವರುಗಳನ್ನು ಹರಿಹರ ನಗರ ಪೊಲೀಸರು ಬಂಧಿಸಿದ್ದಾರೆ.

ಕಳ್ಳತನ ಮಾಡಿದ ಆರೋಪಿತರನ್ನು ಪತ್ತೆ ಮಾಡಲು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್ ಬಿ ಬಸರಗಿಬರವರ ಹಾಗೂ ಡಿವೈಎಸ್ಪಿ ಬಸವರಾಜ ಬಿ.ಎಸ್, ಹರಿಹರ ಠಾಣೆಯ ಪಿ ಐ S.ದೇವಾನಂದ ಮಾರ್ಗದರ್ಶನದಲ್ಲಿ, ಪಿಎಸ್ ಐಗಳಾದ ಪ್ರವೀಣ ಕುಮಾರ, ಚಿದಾನಂದಪ್ಪ ಎಸ್‌.ಬಿ, ಮಂಜುನಾಥ ಕಲ್ಲೆದೇವರ ಹಾಗೂ ಸಿಬ್ಬಂದಿಗಳಾದ ಮಂಜುನಾಥ ಬಿ.ವಿ, ದೇವರಾಜ್ ಸೂರ್ವೆ, ಮಂಜುನಾಥ ಕಾತಮ್ಮನವರ, ಹನುಮಂತ ಗೋಪನಾಳ, ಮುರುಗೇಶ್, ಸಿದ್ಧರಾಜು, ರಾಘವೇಂದ್ರ, ಶಾಂತರಾಜ್, ನಾಗರಾಜ ಕುಂಬಾರ, ಅಕ್ತರ್, ವಿರೇಶ, ಅಡಿವೆಪ್ಪನವರ್‌ ಮಾರುತಿ ಅವರನ್ನೊಳಗೊಂಡ ತಂಡವು ಆರೋಪಿತರನ್ನು ಪತ್ತೆ ಮಾಡಿ ಮಾಲನ್ನು ವಶಪಡಿಸಿಕೊಂಡಿದೆ.

ಈ ಕಾರ್ಯಾಚರಣೆ ನಡೆಸಿದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ ರವರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.‌

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles