ಹರಿಹರ: ನಗರವಾಸಿ ಜಮಾಲ್ ಭಾಷಾ ತಂದೆ ಗೌಸ್ ಸಾಬ್, 21 ವರ್ಷ. ಮಹಾತ್ಮ ಗಾಂಧಿ ಕೊಳಚೆ ಪ್ರದೇಶ ರವರು ಹರಿಹರ ನಗರದ ಶಿವಮೊಗ್ಗ ರಸ್ತೆಯಲ್ಲಿರುವ ಸ್ವಪ್ನ ಬಾರ್ ಮುಂಭಾಗದಲ್ಲಿ ನಿಂತುಕೊಂಡಿರುವಾಗ ಸಚಿನ್ ತಂದೆ ಶಿವಕುಮಾರ್, 20. ವರ್ಷ ಮಟ್ಟಿ ಬೀರಪ್ಪನ ಕಣ, ವಿದ್ಯಾನಗರ. ಹರಿಹರ ಟೌನ್ ರವರು ತನಗೆ ಕುಡಿಯಲಿಕ್ಕೆ ಎಣ್ಣೆಯನ್ನು ಕೊಡಿಸುವಂತೆ ಕೇಳಿದಾಗ ಕುಡಿಸದೆ ಇರುವುದರಿಂದ ಜಮಾಲ್ ಭಾಷ ಇವನಿಗೆ ಅವಾಚ್ಯ ಶಬ್ದಗಳಿಂದ ಬೈದಾಡಿ, ಜೀವ ಬೆದರಿಕೆ ಹಾಕಿ ಸದರಿಯವನು ತನಗೆ ಮದ್ಯವನ್ನು ಕೊಡಿಸಿರುವುದಲ್ಲವೆಂದು ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ಬೆನ್ನಿಗೆ, ಎಡಪಕ್ಕೆಗೆ, ಎದೆಯ ಎಡಭಾಗಕ್ಕೆ ಚುಚ್ಚಿ ಕೊಲೆಗೆ ಪ್ರಯತ್ನಿಸಿದ್ದರಿಂದ ಹರಿಹರ ನಗರ ಠಾಣೆಯಲ್ಲಿ ಗುನ್ನೆ ನಂಬರ್: 176/2021 ಕಲಂ: 324, 307, 504, 506 ಐಪಿಸಿ ಅಡಿಯಲ್ಲಿ 2021 ರಲ್ಲಿ ಪ್ರಕರಣ ದಾಖಲಾಗಿರುತ್ತದೆ.
ನಂತರ ಪ್ರಕರಣದ ತನಿಖಾಧಿಕಾರಿಗಳಾದ ಶ್ರೀಮತಿ ಲತಾ ವಿ ತಾಳೇಕರ್ ಪಿಎಸ್ಐ ಹರಿಹರ ನಗರ ಠಾಣೆ ರವರು ಆರೋಪಿತನನ್ನು ದಸ್ತಗಿರಿ ಮಾಡಿ. ಪ್ರಕರಣದ ತನಿಖೆಯನ್ನು ಪೂರೈಸಿ, ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರವನ್ನು ಸಲ್ಲಿಸಿದ್ದರು.
ಮಾನ್ಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದದ್ದು. ವಾದ ಆಲಿಸಿದ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀ ವಿಜಯನಂದ ರವರು ಆರೋಪಿಗೆ ಎರಡು ವರ್ಷಗಳ ಕಠಿಣ ಶಿಕ್ಷೆ ಮತ್ತು 2,500 ರೂ ದಂಡ ವಿಧಿಸಿ ಆದೇಶಿಸಿರುತ್ತಾರೆ.
ಸರ್ಕಾರದ ಪರ ಸರ್ಕಾರಿ ಅಭಿಯೋಜಕರಾದ ಶ್ರೀ ಸತೀಶ್ ರವರು ವಾದ ಮಂಡಿಸಿದ್ದರು.