-0.7 C
New York
Tuesday, December 24, 2024

Buy now

spot_img

ಹರಿಹರ: 1.5 ಲಕ್ಷ ರೂ ಲಂಚ ಪಡಿಯುವಾಗ ಹರಿಹರ ತಾಪಂ ಇಓ ಹಾಗೂ ಸಾರಥಿ ಗ್ರಾಮ ಪಂಚಾಯಿತಿ ಪಿಡಿಓ ಲೋಕಾಯುಕ್ತ ಬಲೆಗೆ

ಹರಿಹರ: ತಾಲೂಕು ಪಂಚಾಯತ್ ಇಒ ರವಿ ಹಾಗೂ ಸಾರಥಿ ಗ್ರಾಪಂ ಪಿಡಿಒ ರಾಘವೇಂದ್ರ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳಾಗಿದ್ದಾರೆ.ಹರಿಹರದ ಬಳಿಯ ಅಮರಾವತಿ ಕಾಲೋನಿಯಲ್ಲಿ ಪಿಡಿಒ ರಾಘವೇಂದ್ರ ಅವರ ನಿವಾಸದಲ್ಲಿ 1.50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಒ ರವಿ ಅವರ ನಿರ್ದೇಶನದಂತೆ ಪಿಡಿಓ ಲಂಚ ಸ್ವೀಕಾರಿಸಿದ ಹಿನ್ನೆಲೆ ರವಿ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಶ್ರೀನಿವಾಸ ಟಿವಿ ಎಂಬುವರು ಹರಿಹರ ತಾಲ್ಲೂಕು . ಕರಲಹಳ್ಳಿ ಗ್ರಾಮದ ರೀ . ಸರ್ವೇ ನಂಬರ್ 1/5 ರಲ್ಲಿ 1-00 ಎಕರೆ ಜಮೀನನ್ನು ಶ್ರೀ ಕೆ.ಪಿ .: ಆಯುಬ್ ಖಾನ್ ಬಿನ್ ಹಿಮ್ಮತ್ ಖಾನ್ ಮತ್ತು ಅವರ ಹೆಂಡತಿ ಮಕ್ಕಳಿಂದ ಸ್ವಾದೀನ ರಹಿತ ಕ್ರಯದ ಕರಾರು ಪತ್ರ ಮಾಡಿಸಿಕೊಂಡು ಮೇಲ್ಕಂಡ ಎರಡು ಜಮೀನುಗಳನ್ನು ಮೂಲ ಮಾಲೀಕರ ಹೆಸರಿನಲ್ಲಿಯೇ ಸೈಟ್ ಮಾಡಲು ಒಪ್ಪಂದ ಮಾಡಿಕೊಂಡು , ವಸತಿ ಉದ್ದೇಶಕ್ಕಾಗಿ ಅಲೆನೇಷನ್ ಮಾಡಿಸಿ ಸೈಟುಗಳನ್ನಾಗಿ ವಿಂಗಡಿಸಿ, ಈ ಬಗ್ಗೆ ಸೈಟ್ ಪ್ಲಾನ್ ತಯಾರಿಸಿ , ಸದರಿ ಪ್ಲಾನ್‌ನಲ್ಲ ಕಂಡ ನಿವೇಶನಗಳಿಗೆ ಇ – ಸ್ವತ್ತು ಖಾತೆ ದಾಖಲು ಮಾಡಿಸಿದ ನಂತರ ನಮ್ಮ ಹೆಸರಿಗಾಗಲ , ನಾವು ಹೇಳುವವರ ಹೆಸರಿಗಾಗಲೇ ನಿವೇಶನಗಳನ್ನು ನೋಂದಣಿ ಮಾಡಿಕೊಡುವಂತೆ ಜಮೀನುಗಳ ಮಾಲೀಕರಿಂದ ಕ್ರಯದ ಕರಾರು ಪತ್ರ ಮಾಡಿಕೊಂಡು ಈ ಕೆಲಸದ ವಿಚಾರವಾಗಿ ನಾನು ಮತ್ತು ನನ್ನ ಸ್ನೇಹಿತ ಸಂತೋಷ್ ರವರ ಅಣ್ಣ ಭರತ್ ಕುಮಾರ್ ರವರು ಕಛೇರಿಗಳಿಗೆ ಓಡಾಡಿ ದಾಖಲಾತಿಗಳನ್ನು ಮಾಡಿಸುತ್ತಿದ್ದೆವು .

ಜಮೀನುಗಳಿಗೆ ಜಿಲ್ಲಾಧಿಕಾರಿಗಳಿಂದ ಅಲೆನೇಷನ್ ಮಾಡಿಸಿ ತಾಂತ್ರಿಕ ಅನುಮೋದನೆ ಮತ್ತು ವಿನ್ಯಾಸ ನಕ್ಷೆ ರಚಿಸಲು ಎರಡು ಜಮೀನುಗಳ ಮಾಲೀಕರಿಂದ ಪಿ.ಡಿ.ಓ , ಸಾರಥಿ ರವರಿಗೆ ಅರ್ಜಿಯನ್ನು ಕೊಡಿಸಿದ್ದು , ಸದರಿ ಸಾರಥಿ ಗ್ರಾಮ ಪಂಚಾಯಿತಿ ಪಿ.ಡಿ.ಓ.  ರಾಘವೇಂದ್ರ ಹಾಗೂ ಹರಿಹರ ತಾಲ್ಲೂಕು ಪಂಚಾಯಿತಿ ಇ.ಓ.  ಮೇಲ್ದಂಡ ಜಮೀನುಗಳ ಪ್ಲಾನ್ ಅಫ್ರೋವಲ್ ಮಾಡಲು  ಒಟ್ಟು ರೂ . 1.60,000 / – ಲಂಚದ ಹಣಕ್ಕೆ ಬೇಡಿಕೆ ಇಟ್ಟು ಆರೋಪಿತರುಗಳು ಇಂದು ಬೆಳಗ್ಗೆ 9-00 ಗಂಟೆಗೆ ಪಿ.ಡಿ.ಓ , ಸಾರಥಿ ಗ್ರಾಮಪಂಚಾಯಿತಿ  ರಾಘವೇಂದ್ರ  ತಮ್ಮ ಹರಿಹರದ ಅಮರಾವತಿ ಕಾಲೋನಿಯ ವಾಸದ ಮನೆಯಲ್ಲಿ ರೂ . 1,50,000 / – ರೂ . ಪಿರಾದಿ ಕಡೆಯಿಂದ ಲಂಚದ ಹಣ ಸ್ವೀಕರಿಸಿ ಯಶಸ್ವಿಯಾಗಿ ಟ್ರ್ಯಾಪ್‌ ಆಗಿರುತ್ತಾರೆ . ಅಲ್ಲದೆ ಪ್ರಕರಣದಲ್ಲಿ ಎ -2 ಆರೋಪಿತರಾದ ರವಿ , ಇ.ಓ. ತಾಲ್ಲೂಕು ಪಂಚಾಯಿತಿ ರವರನ್ನು ಸಹ ದಸ್ತಗಿರಿ ಮಾಡಿ ತನಿಖೆ ಕೈಗೊಂಡಿರುತ್ತದೆ.

ಇದೆ ವೇಳೆ ಪೊಲೀಸ್ ಅಧೀಕ್ಷಕರು ಎಂ.ಎಸ್. ಕೌಲಾಪೂರೆ,  ಪೊಲೀಸ್ ನಿರೀಕ್ಷಕರಾದ  ಮಧುಸೂದನ್ ಸಿ,  ಪ್ರಭು ಬ ಸೂರಿನ, ಹೆಚ್.ಎಸ್, ರಾಷ್ಟ್ರಪತಿ ಹಾಗೂ ದಾವಣಗೆರೆ ಲೋಕಾಯುಕ್ತ ಠಾಣೆಯ ಸಿಬ್ಬಂದಿಗಳಾದ ಆಂಜನೇಯ, ವೀರೇಶಯ್ಯ , ಧನರಾಜ್ , ಲಿಂಗೇಶ್, ಮಲ್ಲಿಕಾರ್ಜುನ್, ಗಿರೀಶ್, ಕೋಟಿನಾಯ್ಕ, ಕೃಷ್ಣನಾಯ್ಕ, ಬಸವರಾಜ ಮತ್ತು ಜಂಪಿದ್ ಖಾನಂ ಮೇಲ್ಕಂಡ ಪ್ರಕರಣದಲ್ಲಿ ಟ್ರ್ಯಾಪ್ ಕಾರ್ಯಾಚರಣೆಗೆ ಸಹಕರಿಸಿದ್ದು ಹಾಗೂ ತನಿಖೆ ಕೈಗೊಂಡಿದ್ದಾರೆ.

 

Related Articles

1 COMMENT

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles