-4.7 C
New York
Tuesday, December 24, 2024

Buy now

spot_img

ದಾವಣಗೆರೆ: ನಗರದ ಬಂಗಾರದ ಅಂಗಡಿಯಲ್ಲಿ ಕಳ್ಳತನ ಮಾಡಿದ್ದ ಆರೋಪಿಯ ಬಂಧನ: 48 ಕೆಜಿ ಬೆಳ್ಳಿ ಗಟ್ಟಿ ಹಾಗೂ ನಗದು ವಶ

ದಾವಣಗೆರೆ: ಪವನ್ ಜ್ಯೂಯಲರ್ಸ್ ಬೆಳ್ಳಿ-ಬಂಗಾರದ ಅಂಗಡಿಯ ಶೆಟರ್ಸ್ ಲಾಕ್ ಮುರಿದು ಕಳ್ಳತನ ಮಾಡಿದ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ 18 ಲಕ್ಷ ಮೌಲ್ಯದ 48 ಕೆಜಿ ಬೆಳ್ಳಿ ಗಟ್ಟಿ ವಶಕ್ಕೆ ಪಡೆದಿದ್ದಾರೆ.
ನಗರದ ವಿಜಯಲಕ್ಷ್ಮೀ ರಸ್ತೆಯ ಪವನ್ ಜ್ಯೂಯಲರ್ಸ್ ಮಾಲೀಕ ಕಿಶೋರ್ ಕುಮಾರ್ ಕೆ.ಟಿ ಅವರು, ಸೆ.09 ರಂದು ಯಾರೋ ಕಳ್ಳರು ತಮ್ಮ ಅಂಗಡಿಯ ಶೆಟರ್ಸ ಲಾಕ್ ಮುರಿದು ಸುಮಾರು 60 ಕೆ ಜಿ ಬೆಳ್ಳಿ, 10 ಗ್ರಾಂ ಬಂಗಾರ ಮತ್ತು 25,000- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆಂದು ದೂರು ನೀಡಿದ್ದು, ಬಸವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿ ಆರೋಪಿ ಮತ್ತು ಮಾಲು ಪತ್ತೆ ಮಾಡಲು ಹೆಚ್ಚುವರಿ ಎಸ್ಪಿ ಆರ್.ಬಿ ಬಸರಗಿ, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ಬಸವನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಹೆಚ್. ಗುರುಬಸವರಾಜ ನೇತೃತ್ವದಲ್ಲಿ ಪಿಎಸ್ ಐ ಜಿ.ನಾಗರಾಜ ಹಾಗೂ ಸಿಬ್ಬಂದಿಯವರನ್ನೊಳಗೊಂಡ ತಂಡವನ್ನು ರಚನೆ ಮಾಡಿ ಆರೋಪಿ ಮತ್ತು ಮಾಲಿನ ಪತ್ತೆ ಕಾರ್ಯವನ್ನು ಕೈಗೊಳ್ಳಲಾಗಿತ್ತು.
ಈ ತಂಡವು ಮೇಲ್ಕಂಡ ಪ್ರಕರಣದಲ್ಲಿನ ಆರೋಪಿತರು ಹಾಗೂ ಸ್ವತ್ತಿನ ಪತ್ತೆ ಕಾರ್ಯ ಕೈಗೊಂಡಿದ್ದು, ವಿವಿಧ ಕಡೆ ಮಾಹಿತಿಯನ್ನು ಕಲೆಹಾಕಿ ಭಾತ್ಮಿದಾರರ ಖಚಿತ ಮಾಹಿತಿ ಮೇರೆಗೆ ಮೇಲ್ಕಂಡ ಪ್ರಕರಣ ಆರೋಪಿತನಾದ ಜೀಬನ್ ಸಿಂಗ್ @ ಶಂಕರ್ ಸಿಂಗ್, ಸುಮಾರು 55 ವರ್ಷ, ಬಬಲಾದ ಗ್ರಾಮ, ಕಲಬುರಗಿ ಜಿಲ್ಲೆ, (ಸ್ವಂತ ಊರು: ಸೊಲ್ಲಾಪುರ ಜಿಲ್ಲೆ, ಮಹಾರಾಷ್ಟ್ರ) ಈತನನ್ನು ಬಂಧಿಸಲಾಗಿದೆ.

 

ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಆರೋಪಿತನು ದಾವಣಗೆರೆ ನಗರದಲ್ಲಿನ ಪವನ್ ಜ್ಯೂಯೆಲರ್ಸ ಬೆಳ್ಳಿ-ಬಂಗಾರದ ಅಂಗಡಿಯ ಶೆಟರ್ಸ್ ಲಾಕ್ ಮುರಿದು ಅಂಗಡಿಯಲ್ಲಿನ ಪೂಜಾ ಸಾಮಾನುಗಳನ್ನು ಕಳ್ಳತನ ಮಾಡಿರುವ ಬಗ್ಗೆ ತಪ್ಪೋಪ್ಪಿಕೊಂಡು ಕಳ್ಳತನ ಮಾಡಿದ ಎಲ್ಲಾ ಬೆಳ್ಳಿಯ ವಸ್ತುಗಳನ್ನು ರಾಣೆಬೇನ್ನೂರು ನಗರದ ಎಂ.ಜಿ ರಸ್ತೆಯಲ್ಲಿರುವ ಬೆಳ್ಳಿ-ಬಂಗಾರದ ಅಂಗಡಿಯೊಂದರ ಮಾಲೀಕನಿಗೆ ಮಾರಿರುವುದಾಗಿ ತನಿಖೆಯಲ್ಲಿ ತಿಳಿಸಿದ್ದಾನೆ.
ಕಳ್ಳತನವಾದ ಮಾಲನ್ನು ಸ್ವೀಕರಿಸಿ ಬೆಳ್ಳಿಯನ್ನು ಕರಗಿಸಿದ ವ್ಯಕ್ತಿಯಿಂದ ಮೇಲ್ಕಂಡ ಪ್ರಕರಣಕ್ದ ಅಂದಾಜು 18 ಲಕ್ಷ ರೂ ಮೌಲ್ಯದ ಒಟ್ಟು48 ಕೆ.ಜಿ 130 ಗ್ರಾಂ ಕಚ್ಚಾ ಬೆಳ್ಳಿ ಗಟ್ಟಿ ಬೆಳ್ಳಿಯನ್ನು ವಶಪಡಿಸಿಕೊಂಡಿರುತ್ತಾರೆ. ಪ್ರರಕಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ರವರು ಪ್ರಶಂಸಿಸಿರುತ್ತಾರೆ.

 

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe
- Advertisement -spot_img

Latest Articles